ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ
ವಚನ
ಎಲ್ಲ ಎಲ್ಲವನರಿದು ಫಲವೇನಯ್ಯಾ
ತನ್ನ ತಾನರಿಯಬೇಕಲ್ಲದೆ ?
ತನ್ನಲ್ಲಿ ಅರಿವು ಸ್ವಯವಾಗಿರಲು
ಅನ್ಯರ ಕೇಳಲುಂಟೆ ?
ಚೆನ್ನಮಲ್ಲಿಕಾರ್ಜುನಾ
ನೀನರಿವಾಗಿ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮ ನರಿದೆನಯ್ಯಾ ಪ್ರಭುವೆ
12 ನೇ ಶತಮಾನದ ಶ್ರೇಷ್ಠ ಶರಣೆಯವರಾದ ಅಕ್ಕಮಹಾದೇವಿಯವರು ಈ ಒಂದು ವಚನದಲ್ಲಿ ಮೊದಲು ತನ್ನನ್ನು ತಾನು ಅರಿತುಕೊಳ್ಳಬೇಕು. ಎನ್ನುವ ಅರಿವಿನ ಪ್ರಜ್ಞೆಯನ್ನು ಮೂಡಿಸಿ ನಡೆದ ಮಹಾನ್ ಶರಣೆ ಅಕ್ಕಮಹಾದೇವಿಯವರಾಗಿದ್ದಾರೆ .
ಎಲ್ಲ ಎಲ್ಲವನರಿದು ಫಲವೇನಯ್ಯಾ
ತನ್ನ ತಾನರಿಯಬೇಕಲ್ಲದೆ ?
ಈ ಜಗತ್ತಿನಲ್ಲಿ ನಾನು ಎಲ್ಲವನ್ನೂ ಅರಿತಿರುವೆ ತಿಳಿದಿರುವೆ .ಪರಮಾತ್ಮ ಆದರೆ ನನಗೆ ನನ್ನ ಒಳಗಿನ ಅರಿವನ್ನು ನನಗೆ ತಿಳಿದುಕೊಳ್ಳಲು ಆಗಲಿಲ್ಲ.
ಮೊದಲು ನನ್ನನ್ನು ನಾನು ತಿಳಿದುಕೊಂಡು ಸಾಗಬೇಕು ಎನ್ನುವ ಅರಿವಿನ ಗುರು ಮಾರ್ಗ ವನ್ನು ನಾ ತಿಳಿಯಬೇಕು .ಎನ್ನುವ ದಿವ್ಯವಾದ ಛಲವನ್ನು ಹೊತ್ತು ನಡೆದರು ಅಕ್ಕ.
ಅಕ್ಕನವರ ಅರಿವಿನ ಗುರು ತುಂಬಾ ವಿಶಾಲವಾದ ವಿಭಿನ್ನವಾದ ಜೀವನದ ಹುಡುಕಾಟ .ಅದನ್ನು ಸಾಧಿಸಿ ತೋರಿಸಿದ ಮೊದಲ ಸ್ತ್ರೀ ನಮ್ಮ ಅಕ್ಕಮಹಾದೇವಿಯವರೇ ಆಗಿದ್ದಾರೆ .
ಉತ್ತಮ ನಡೆ ನುಡಿ ಅನುಭಾವ ಸಿದ್ದಿ ,ಬುದ್ಧಿ ಇವೆಲ್ಲವೂ ಅಕ್ಕನಲ್ಲಿವೆ .ಅದನ್ನು ಮತ್ತೆ ಮತ್ತೆ ಹುಡುಕಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ದಿವ್ಯವಾದ ಪ್ರಯತ್ನ ಅಕ್ಕನವರದು .
ಬೇರೆಯವರ ಮಾತು ನಮಗೇತಕೆ .
ಅವರು ಹಾಗೆ ಇವರು ಹೀಗೆ ಎಂದು ಹೊತ್ತು ಕಳೆಯುವ. ಅನೇಕರು ಮೊದಲು ತಾವು ತಮ್ಮನ್ನು ಅರಿತುಕೊಂಡು ತಮ್ಮ ಅಡಿಯನ್ನು ಇಡಬೇಕು ಎನ್ನುವ ಅರ್ಥವನ್ನು ನಾನು ತಿಳಿದುಕೊಂಡಿರುವೆ .
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನಾ
ತನ್ನರಿವೇ ತನಗೆ ಗುರುವಾದ ಬಳಿಕ ಅನ್ಯರನ್ನು ನಾನೇನು ಕೇಳಲಿ ಚೆನ್ನಮಲ್ಲಿಕಾರ್ಜುನಾ .ನಾನು ಮಾಡುವ ಕೆಲಸ ಕಾರ್ಯಕ್ಕೆ ,ತಪ್ಪು ಒಪ್ಪುಗಳಿಗೆ ನಾನೇ ಕಾರಣಳು.
ಅನೇಕ ಕಾರಣಗಳು ನನ್ನಲ್ಲಿ ಇರುವಾಗ ಅನ್ಯರನ್ನು ನಾನೇಕೆ ದೂಷಿಸಲಿ?
ದಡ್ಡಳಾಗಿರುವೆ ಅನ್ಯರ ವಿಚಾರ ದಲ್ಲಿ ಅವರ ಅರಿವಿನಲ್ಲಿ, ಅವರ ಜ್ಞಾನದಲ್ಲಿ ,ಮಂಕುಕವಿದಿದೆ ಮನಕ್ಕೆ ,ಕೋತಿಯಂತೆ ಕಪಿಚೇಷ್ಟೆ ಯ ಮನಕೆ ,ಇದಿರು ಹಳಿದಿರುವೆ ಆಪತ್ತು ,ತಂದಿತ್ತು ನನಗೆ ನನ್ನ ಅರಿವು .ಅರಿಯಬೇಕಿತ್ತು ನಾ ಹೊನ್ನ ಏರುವ ಅರಮನೆಗೆ ತಿರುಗಿದೆ ಮಂಕುಕವಿದ ಅರಿವು ಬಡಿದು ಎಚ್ಚರಿಸಿತು ನನಗಿಂದು ಚೆನ್ನಮಲ್ಲಿಕಾರ್ಜುನಾ .ತಿರುಗಿದೆ ,ಈ ಸೃಷ್ಟಿಯ ಜೀವ ರಾಶಿಯಲ್ಲಿ ಕೈ ಮುಗಿದು ಬೇಡಿದೆ ಎಲ್ಲಿ ಇರುವನು ನನ್ನ ಚೆನ್ನಮಲ್ಲಿಕಾರ್ಜುನನು ಎಂದು .ಹಗಲಿರುಳು ಸುತ್ತಿದೆ ಕೇಳುವಾ ಪ್ರಶ್ನೆಗಳಿಗೆ ಮಾರುತ್ತರವ ನಾ ನೀಡದೆ ಅರಿತುಕೊಂಡೆ ನನ್ನ ಅನುಭಾವದ ಅಡುಗೆಯನು ಸ್ವಲ್ಪ ಮೆಲ್ಲಿದೆ ಚೆನ್ನಮಲ್ಲಿಕಾರ್ಜುನಾ ?
ನನ್ನ ಅರಿವನ್ನು ನಾನು ಅರಿತುಕೊಂಡು ಮುಂದೆ ಸಾಗಿದೆ ಚೆನ್ನಮಲ್ಲಿಕಾರ್ಜುನಾ
ಸ್ವಯವಾಗಿ ಹೋಯಿತು ಅರಿವು ನನಗೆ .
ಕೊನೆಗೆ ಈ ಅರಿವೆಂಬ ದಿವ್ಯ ಜ್ಞಾನವು ನನ್ನ ಕರವನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು .
ಜಾಗ್ರತಳಾದೆ ನಾನು ಚೆನ್ನಮಲ್ಲಿಕಾರ್ಜುನಾ ಅರಿತುಕೊಂಡೆ. ನಾನು ನನ್ನ ಮನವನ್ನು ಆಲಂಗಿಸಿಕೊಂಡು ಬಿಟ್ಟೆ ಅಪ್ಪಿಕೊಂಡೆ ನನ್ನ ಅರಿವಿನ ಮನವನ್ನು ಸಖಿಯನ್ನಾಗಿಸಿಕೊಂಡು ಓಡಿಸಿ ಬಿಟ್ಟೆ ದುಷ್ಟ ದುರಹಂಕಾರದ ವೈರಿಗಳನ್ನು ಚಂಡಾಡಿಬಿಟ್ಟೆ ಚೆನ್ನಮಲ್ಲಿಕಾರ್ಜುನಾ .ಎನ್ನುವ ಅರಿವಿನ ಅಹಂಭಾವವನ್ನು ತಿರಸ್ಕರಿಸಿದ ಅಕ್ಕನವರ ನಡೆ ಪುರುಷ ಪುಣ್ಯ ಪುರುಷ ಹಾದ ಜಲವೆಲ್ಲವೂ ತೀರ್ಥ ಪ್ರಸಾದ ಆಯಿತು .
ನೀನರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮ ನರಿದೆನಯ್ಯಾ ಪ್ರಭುವೆ
ನಿಮ್ಮ ದಿವ್ಯವಾದ ಪಥದಿಂದ ನೀವು ಅರಿವಾಗಿ ನಿಮ್ಮಿಂದ ನಿಮ್ಮ ಅರಿತೆನು ಚೆನ್ನಮಲ್ಲಿಕಾರ್ಜುನಾ .
ಮತ್ತಾರಿಂದ ಯಾವುದನ್ನೂ ಅರಿತಿಲ್ಲ .ನನ್ನ ತನು ಮನ ಭಾವ ತುಂಬೆಲ್ಲ ನೀವೆ ತುಂಬಿದ ಬಳಿಕ ನಾನು ಯಾರನ್ನು ಅರಿಯಲು ಸಾಧ್ಯ? ಚೆನ್ನಮಲ್ಲಿಕಾರ್ಜುನಾ ನಿಮ್ಮಿಂದಲೇ ನಿಮ್ಮನ್ನು ಅರಿತುಕೊಂಡೆ.
ಎನ್ನುವ ಅಕ್ಕನವರ ಅರಿವಿನ ಭಾವ ಪ್ರಜ್ಞೆಯ ಜ್ಞಾನ ನಮ್ಮ ಅರಿವನ್ನು ವಿಸ್ತರಿಸುವ ಒಳ ಅಂತರಾತ್ಮದ ಸುಂದರ ಮೆಲಕು ಅಕ್ಕನವರದು .
ಅಂಥಹ ಸುಂದರವಾದ ಅಕ್ಕನವರ ಒಳಭಾವದ ಅರಿವಿನ ಗುರುಗಳು ನಾವುಗಳೇ.
ಒಟ್ಟಿನಲ್ಲಿ ಮೊದಲು ನಮ್ಮ ನ್ನು ನಾವು ಅರಿಯಲು ಪ್ರಯತ್ನಿಸೋಣ. ನಮ್ಮನ್ನು ಅರಿತ ಬಳಿಕ ಬೇರೆಯವರನ್ನು ಪ್ರಶ್ನಿಸೋಣ .ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ದಿವ್ಯವಾದ ಜ್ಞಾನವೇ ಈ ಚೆನ್ನಮಲ್ಲಿಕಾರ್ಜುನಾ ಎಂಬ ಅರಿವು .
ಇಂಥಹ ದಿವ್ಯವಾದ ಜ್ಞಾನದ ಚೆನ್ನಮಲ್ಲಿಕಾರ್ಜುನನನ್ನು ಅರಿವಿನ ಮೂಲಕ ಹುಡುಕಾಡಲು ಹಚ್ಚಿದ ಅಕ್ಕನವರಿಗೆ ಅನಂತ ಶರಣು ಶರಣಾರ್ಥಿಗಳು ..
______
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಸರ್ಕಾರಿ ಪದವಿಪೂರ್ವ ಕಾಲೇಜು ಖನಗಾಂವ
ಪ್ರಾಚಾರ್ಯರು
ಇವರು ಮೂಲತ:ಬೆಳಗಾವಿ ಜಿಲ್ಲೆಯ ಮುರಗೋಡದವರಾಗಿದ್ದು, ಸರಕಾರಿಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಪ್ರಕಟಿತ ಕೃತಿಗಳು ಆರು
1ನೆನಪಿನ ಅಂಗಳದಲ್ಲಿ (ಕವನ ಸಂಕಲನ)
2 ಮೌನಗಳೇ ಮಾತನಾಡಿ
3ಬದುಕು ಒಂದು ಹೊತ್ತಿಗೆ
4 ಕನಸುಗಳ ಜಾತ್ರೆ
5ಸಂತೆಯೊಳಗಿನ ಅಜ್ಜಿ
6 ಬದುಕೇ ಒಂದು ಹೊತ್ತಿಗೆ
ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಇರುವ ಕೃತಿಗಳು
1ನನಗೆ ಇಂದು ಒಂದು ಕನಸಿದೆ
2 ಕೆಸರೊಳಗಿನ ಕಮಲ
3ಕಾವಲುಗಾರ
5 ಸವಿ ಮನ
6 ಅಭಿಮಾನಿ
7 ಗಾಯತ್ರಿ ಸಣ್ಣ ಕಥೆ
8 ಸಂಗ್ರಹ ಗ್ರಂಥ ರವಿಶಂಕರ ಗುರೂಜಿ ಯವರ ನುಡಿಗಳು ಅಮೃತ ಬಿಂದು
09 ಶರಣರ ವಚನಗಳ ವಿಶ್ಲೇಷಣೆ ಕೃತಿ
ಪ್ರಶಸ್ತಿಗಳು
1ಕುವೆಂಪು ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಕನ್ನಡ ಸ್ವಾಭಿಮಾನ ಗೌರವ ಪ್ರಶಸ್ತಿ
2ಸತತ ಹತ್ತುವರುಷ ಕನ್ನಡ ನಿಧಿ ಹಾಗೂ ಕನ್ನಡ ರತ್ನ ಪ್ರಶಸ್ತಿ
3 ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
4 ಗೌರವ ಡಾ.ಲಿಟ್ ಪ್ರಶಸ್ತಿ
5 ಕಾವ್ಯಚೇತನ ಪ್ರಶಸ್ತಿ
6 ರಾಷ್ಟ್ರೀಯ ಡಾ ಸರ್ವಪಲ್ಲಿ ರಾಧಾಕೃಷ್ಣ ಪ್ರಶಸ್ತಿ
ವಚನ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ,
ಧನ್ಯವಾದ ಗಳು
ಅಕಮಹಾದೇವಿ ಯವರ ವಚನ ಸುಪರ್ ಮಡಮ ವಚನ ಸಾಹಿತ್ಯ, ವಿಶ್ಲೇಷಣೆ ತುಂಬಾ ಚೆನ್ನಾಗಿದೆ