ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಹಣತೆ ಉಸಿರಿನ ಒರತೆ

ಹಣತೆ ಮಾರುತಿಹಳು ನಾರಿ
ಸಹಜತೆಯ ಗುಣವನು ಸಾರಿ

ನಿಮಗಿದು ಮಣ್ಣಿನ ಹಣತೆ
ನಮ್ಮಯ ಉಸಿರಿನ ಒರತೆ

ಹಚ್ಚಿ ಮನೆಗಳಲಿ ಮಣ್ಣಿನ ದೀಪ
ತುಂಬಿ ಮನಗಳಲಿ ಶಾಂತ ಪ್ರದೀಪ

ಹಣತೆಯು ಬೀರುತಿರೆ ಮಂದ ಪ್ರಕಾಶ
ತಣಿವುದು ಎಲ್ಲರ ಮನಗಳ ಆಕ್ರೋಶ

ಮಣ್ಣಿನ ಹಣತೆಯ ಇಷ್ಟದಿ ಕೊಳ್ಳಿರಿ
ಚಂದದ ಬಣ್ಣದ ಜ್ಯೋತಿಯ ಹಚ್ಚಿರಿ

ನಿಮ್ಮಮನೆಗಳ ಕತ್ತಲೆಯ ಕಳೆಯಲು
ನಮ್ಮ ಬಾಳನು ಹರಸಿ ನಗಿಸಲು

ಪ್ರಕೃತಿಯ ಉಳಿಸಲು ಹಚ್ಚಿರಿ ಹಣತೆಯ
ಬಡವನ ಬೆವರಿಗೆ ಸಲ್ಲಿಸಲು ಧನ್ಯತೆಯ

ಹಣತೆಯು ಸಾರಿತು ಸರಳತೆಯ ಪಾಠ
ದೀಪದಿ ತೋರುತ ನೆಮ್ಮದಿಯ ಸಂಕೇತ

ಆಚರಿಸಿ ಹಣತೆಯಲ್ಲಿ ದೀಪಾವಳಿ
ಮೆರೆಯಿರಿ ಸಾರ್ಥಕತೆಯ ಪ್ರಕೃತಿಯಲಿ


One thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಹಣತೆ ಉಸಿರಿನ ಒರತೆ

Leave a Reply

Back To Top