ಸವಿತಾ ದೇಶಮುಖ
ನನ್ನ ಅಬ್ಬೆಯು
ಕನ್ನಡವೇ ನನ್ನೊಲುಮೆಯ ಅಬ್ಬೆಯು
ನಿನ್ನ ನಡೆ -ನುಡಿ ಭಾಷೆಯು
ಎನ್ನೊಳಗಣದ ಚೇತನವು….
ಹುಟ್ಟಿದೆ ನಿನ್ನ ಆಲಿಸುತ್ತಲೇ
ಬೆಳೆದು ನಿಂದೆ ನಿನ್ನ ಕಲಿಕೆಯಲೇ
ಇಂದು ಸಾಧನೆಯ ಹೆದ್ದಾರಿ ನೀನು…
ಎನಿತು ಮಧುರ -ಇಂಪು ತಂಪು
ಈ ನ್ನಿನ ಶಬ್ದ- ನುಡಿಗಳು
ಮನದೊಳಗಣ ನಂದನವನವು ….
ನಿನ್ನ ಅರಿತಂತೆ ಇನ್ಯಾರನು
ನಾನು ಅರಿಯಲು ಸಾಧ್ಯವೇ
ನನ್ನೆದೆಯ ಭಾವ ಸುಧೆಯು ನೀನು….
ಬೆರೆತು ನಿಂದೆ ನಿನ್ನಲ್ಲಿ ನನಗಾಗಿ
ನಿನ್ನಲ್ಲಿ ನಾನಾಗಿ ಎಷ್ಟು ತಿರುಳು
ಹೊರಳುಗಳು ಬಲು ಸುಂದರ ……
ನಿನ್ನ ಭಾಷೆ ಅಂತ ಕರೆಯಲುಂಟೆ
ಎನ್ನ ಎದೆಯ ಮೀಟಿ ಮೀಟಿ
ನುಡಿಸುತ್ತಿರುವೆ ನೂರೆಂಟು ರಾಗವ …
ತೆರೆತೆರೆಯೊಳಾಡಿ ಉಲಿದಾಡುತ
ಹೊರಹೊಮ್ಮಿ ಬರುವ ಸುಲಲಿತ ವಾಣಿ
ಎಂಥ ಸೊಗಸು ಕನ್ನಡ…
ಸಾಗರದಷ್ಟು ಆಳ ನಿನ್ನೊಳಗಣ
ಶಬ್ದಗಳ ರಮ್ಯ ತಾಣವು
ನಿನ್ನೊಡಲವ ಸುಲಿಲವೋ…
ಎನಿತು ಬಣ್ಣಿಪಲಿ ನಿನ್ನ ಭಾವ
ತಾಳಗಳ ಸಮ್ಮೇಳನದಲ್ಲಿ ಸುರಿದಂತ
ಶಬ್ದಗಳ ಓಕುಳಿಯು…
ಸವಿರಸದ ಔತಣವು
ನಿನ್ನ ಶಬ್ದಗಳ ಮಾಧುರ್ಯವು
ನಿನ್ನಾ ಭಾವ ಸುನಯನವು….
ನೀನು ವಿಶ್ವ ಸಿರಿಯಂತೆ
ಸುಂದರವು ಸುಮಧುರ ವು
ನಿನ್ನ ಕುರುಪ ಗೊಳಿಸುವವರು ಕೆಲವರು….
ಭಾಷೆ ಭಾಷೆಯ ಮಧ್ಯ ಎತ್ತಿ
ಕಹಿಯ ಹಿಂಡಿ ರಾಡಿಗೊಳಿಸುವರು
ಎಲ್ಲ ಭಾಷೆಗಳಿಗಿದೆ ಗತ್ತು ಗಮತ್ತು….
ಅದನರಿತು ಎಲ್ಲವನ್ನು ಗೌರವಿಸುತ
ನಮ್ಮ ಭಾಷೆಯನ್ನು ಆಧರಿಸುತ
ಒಲ್ಮೆಯಿಂದ ನಲಿಯೋಣ…..
ಕನ್ನಡವೇ ಸಕಲ- ಸರ್ವಸ್ವವು
ಕನ್ನಡಾಂಬೆಗೆ ನನ್ನ ಈ ನಮನ
ನಿನ್ನ ನುಡಿಗಳಿಂದ ಕರಣಗಳು ಪುನಿತ್…..
ಸವಿತಾ ದೇಶಮುಖ
Super