ಸಂಭ್ರಮ ಸಂಗಾತಿ
ಪೂರ್ಣಿಮಾ ಕೆ.ಜೆ
‘ಸುವರ್ಣ ನಾಡಲ್ಲಿ
ಹಬ್ಬಗಳ ಹಾಡು’
ಭಾರತದ ಭೂಪಟದಲ್ಲಿ ಗೋಡಂಬಿ ಆಕಾರದಲ್ಲಿರುವ ಈ ಕರ್ನಾಟಕ ಕನ್ನಡ ನಾಡು ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡ ನಾಡು ನುಡಿ ಗೀತೆಗಳು ಮೊಳಗುತ್ತಿವೆ ಕವಿವಾಣಿಯಂತೆ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು…. ಈ ಪಂಕ್ತಿಯಲ್ಲಿ ಬರುವ ಕವಿವಾಣಿ ಎಷ್ಟೊಂದು ಮೃದುಲ ನಿಜಕ್ಕೂ ಕನ್ನಡ ನಾಡು ಕನ್ನಡ ದೇವಿಯ ಭುವನೇಶ್ವರಿ ನಮ್ಮೆಲ್ಲರಿಗೂ ಪ್ರೀತಿ. ಕನ್ನಡ ನಾಡ ದೇವಿಯ ಸ್ಮರಣೆ ಸಂರಕ್ಷಣೆ ಕನ್ನಡಮ್ಮನ ಕುಮಾರರಾದ ಅಂದರೆ ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ್ತವ್ಯ.
ಕನ್ನಡ ಭಾಷೆಗೆ ಸಾವಿರ ವರ್ಷಗಳ ಇತಿಹಾಸವಿದೆ ಕನ್ನಡ ಭಾಷೆಯು ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ ಕನ್ನಡ ಪದಗಳು ಅಶೋಕನ ಕಾಲದಲ್ಲಿ ಬಳಕೆಯಲ್ಲಿತೆಂದು ಎಂದು ಶಿಲಾ ಶಾಸನಗಳಿಂದ ತಿಳಿದು
ಬರುತ್ತದೆ. ಗ್ರೀಕರು ಮತ್ತು ರೋಮನ್ನರು ವ್ಯಾಪಾರಿಗಳು ಇಲ್ಲಿ ಬರುತ್ತಿದ್ದಾಗ ಅವರ ವಾಕ್ಯದಲ್ಲಿ ಕನ್ನಡ ಪದಗಳು ಬಳಕೆಯಾಗಿವೆಯಂತೆ. ಕನ್ನಡ ಅಕ್ಷರಗಳು ಮುತ್ತಿನಂತಿದ್ದು ಕನ್ನಡ ಸಾಹಿತ್ಯ ಸಾಗರದಂತಿದೆ ಕ್ರಿಸ್ತಶಕ ಐದನೇ ಶತಮಾನದಲ್ಲಿ ಹಾಸನ ಜಿಲ್ಲಾ ಅಲ್ಮಿಡಿ ಎಂಬ ಗ್ರಾಮದಲ್ಲಿ ದೊರೆತ ಶಾಸನವೇ ಮೊದಲ ಆಧಾರವಾಗಿದೆ. ಮತ್ತು ನಮಗೆ ದೊರೆತ ಮೊದಲನೆಯ ಗ್ರಂಥ ವೆಂದರೆ ಕವಿರಾಜಮಾರ್ಗ ಇದು ಶಾಸ್ತ್ರ ಗ್ರಂಥವಾಗಿದ್ದು ಕ್ರಿಸ್ತಶಕ 9ನೇ ಶತಮಾನದಲ್ಲಿ ರಚಿತವಾಗಿದೆ. ಕವಿರಾಜಮಾರ್ಗ ಗ್ರಂಥ ರಚಿತವಾಗಿ ವಾಗುವುದಕ್ಕಿಂತ ಮೊದಲು ಅನೇಕ ಕವಿಗಳು ಕಾವ್ಯ ರಚನೆ ಮಾಡಿದ್ದರು ಆದರೆ ದುರ್ದೈವದಿಂದ ಕನ್ನಡದಲ್ಲಿ ದಾಖಲೆ ಉಳಿದಿಲ್ಲ ನಮಗೆ ಉಳಿದಿದ್ದು ಶಾಸನ ಸಾಹಿತ್ಯ ಮಾತ್ರ.
ಕನ್ನಡ ನಾಡಿಗೆ ಭವ್ಯವನಿಸಿದ ಪ್ರಾಚೀನ ಪರಂಪರೆ ಇದೆ ಸಂಸ್ಕೃತಿ ಸಾಹಿತ್ಯ ರಾಜಕೀಯ ಇತಿಹಾಸ ಭೂಗೋಳ ಎಲ್ಲಾ ರೀತಿಯಲ್ಲಿಯೂ ಈ ಪ್ರಾಚೀನ ಪರಂಪರೆ ವ್ಯಾಪಕವೆನಿಸಿದೆ ನಮ್ಮ ನಾಡಿನ ಧರ್ಮ ಕೋಶ ಭಾಷೆ ಮೊದಲಾದ ವಿಶಿಷ್ಟ ವಿಚಾರಗಳ ಪರಂಪರೆಯ ಬಗ್ಗೆ ನಮ್ಮ ಅಭಿಮಾನ ಸತತವೂ ಮಿಗಿಲನಿಸುತ್ತಿರಬೇಕು ಕನ್ನಡ ನಾಡನ್ನು ಕರುನಾಡು ಎಂದು ಕರೆಯುತ್ತಿದ್ದರು ಕರ್ನಾಟಕವೆಂದು ಕರೆಯುತ್ತಿದ್ದೇವೆ. ತುಂಬಾ ಹಿಂದೆ ಕರ್ನಾಟಕ ಪ್ರಾಂತ್ಯ ಇಂದಿಗಿಂತಲೂ ಹೆಚ್ಚಿನ ವಿಸ್ತೀರ್ಣವನ್ನ ಪಡೆದಿತ್ತು ಕವಿವಾಣಿಯಲ್ಲಿ ಮುಳುಗುವಂತೆ ಕಾವೇರಿಯಿಂದ ಗೋದಾವರಿವರೆಗೂ ನಮ್ಮ ಕರುನಾಡು ಅಂದರೆ ಕನ್ನಡ ವ್ಯಾಪಿಸಿತ್ತು ಅಂದಿನ ರಾಜ್ಯಗಳಿಗೆ ಮೇರೆಗಳು ನಾಲ್ಕು ದಿಸಗಳಲ್ಲಿ ನದಿ ಪರ್ವತಗಳೇ ಆಗಿದ್ದವು
ಹೀಗೆ ಕನ್ನಡ ಭಾಷೆ ಎಂಬುದು ಜೇನುತುಪ್ಪ ತುಂಬಿದ ಕೊಡದಂತಿದೆ 1947 ರಂದು ಭಾರತಕ್ಕೆ ಸ್ವಾತಂತ್ರ್ಯ ನಂತರ ಭಾಷಾವಾರು ಆಧಾರದ ಮೇಲೆ 1956 ನವಂಬರ್ ಒಂದರಂದು ಮೈಸೂರ ರಾಜ್ಯವಾಗಿ ನಿರ್ಮಾಣವಾಯಿತು ನಂತರ 1973 ರಲ್ಲಿ ಕರ್ನಾಟಕವನ್ನು ಹೆಸರಾಯಿತು ಅದಕ್ಕೂ ಮೊದಲು ಕನ್ನಡ ನಾಡು 18 20 ಆಡಳಿತ ಹಂಚಿ ಹೋಗಿತ್ತು. ಇದರಿಂದ ಆಡಳಿತದ ಮೇಲೆ ಅನೇಕ ಕೆಟ್ಟ ಪರಿಣಾಮವು ಆಗಿತ್ತು, ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ, ಸಂರಕ್ಷಣೆಗೆ ಹಾಗೂ ಅಭಿವೃದ್ಧಿಯನ್ನು ಸಾಧಿಸಲು 189 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ 1915ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ ಯಾಯಿತು, ಅಷ್ಟೇ ಅಲ್ಲ ಅಂದಿನ ಕರ್ನಾಟಕ ಹಲವಾರು ಸಾಮ್ರಾಜ್ಯಗಳ ತವರೂರು ಎನ್ನಿಸಿತ್ತು, ಕದಂಬ ಚಾಲುಕ್ಯ ವೈಸಳ ವಿಜಯನಗರ ಗಂಗಾ ರಾಷ್ಟ್ರಕೂಟ ಮೊದಲಾದ ರಾಜವಂಶದವರು ಕನ್ನಡ ನಾಡನ್ನು ಅಂದರೆ ವಿಶಾಲ ಕರ್ನಾಟಕವನ್ನು ಆಳಿದ ವೀರರು ವೀರರು ಆಡಳಿತದಲ್ಲಿ ದಕ್ಷರು ಸಮರ್ಥರು ಎನಿಸಿದವರಾಗಿದ್ದರು ರಾಜಕೀಯ ಪರಂಪರೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ತ್ರೇತಾಯುಗದಿಂದಲೂ ಕನ್ನಡ ನಾಡು ಪ್ರಸಿದ್ಧಿ ಪಡೆದಿದೆ ಎಂಬುದನ್ನು ಅರಿತಾಗ ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ ಎನಿಸುವುದು ರಾಮಾಯಣದಲ್ಲಿ ಬರುವ ವಾಲಿ ಸುಗ್ರೀವರ ರಾಜ್ಯವಾದ ಕಿಸ್ಕಿಂದೇ ಕನ್ನಡ ನಾಡಿನ ಸರಹದ್ದಿನಲ್ಲಿಯೇ ಇದೆ.
ಅದರಲ್ಲೂ ವಿಜಯನಗರದ ಆಳ್ವಿಕೆಯ ಕಾಲ ಕರ್ನಾಟಕದ ಇತಿಹಾಸದಲ್ಲಿಯೇ ಸುವರ್ಣ ಯುಗ ಎನ್ನಬಹುದು ವಾಣಿಜ್ಯದಲ್ಲಿ ಕನ್ನಡ ನಾಡು ಎಷ್ಟೊಂದು ಮುಂದುವರೆದಿತ್ತು ಅಂದರೆ ಸಂತೆ ಬೀದಿಗಳಲ್ಲಿ ವಣಜಿಗರು ಮುತ್ತು ರತ್ನಗಳನ್ನ ರಾಶಿ ಹಾಕಿಕೊಂಡು ಸೇರುಗಳಲ್ಲಿ ಅಳಿದು ಮಾರಾಟ ಮಾಡುತ್ತಿದ್ದರು ಇನ್ನೂ ಒಂದು ವಿಶೇಷವೆಂದರೆ ಯಾರೊಬ್ಬರೂ ಬೆಲೆಬಾಳುವ ಈ ಅಮೂಲ್ಯ ವಸ್ತುಗಳನ್ನು ಕಿಂಚಿತ್ತು ಕೊಳ್ಳೆ ಹೊಡೆದುಕೊಂಡು ಹೋಗುತ್ತಿರಲಿಲ್ಲ ಅಂದಮೇಲೆ ಈ ಆಳ್ವಿಕೆಯುಗವು ಸುವರ್ಣ ಯುಗ ಎನ್ನಿಸಿಕೊಳ್ಳಲು ಅರ್ಹವೆನಿಸಿಯೇ ಇದೆ.
ಕನ್ನಡ ನಾಡಲ್ಲಿ ಹುಟ್ಟಲು ಪುಣ್ಯವು ಬೇಕು ಇಲ್ಲಿ ಪವಿತ್ರ ನೆಲ ಜಲ ವಿಶ್ವಕ್ಕೆ ಬೆಳಕು ಇಲ್ಲಿ ಕೃಷ್ಣೆ ಕಾವೇರಿ ಗೋದಾವರಿ ತುಂಗೆ ಬದ್ರೆ ಮಹಾನದಿಗಳು ಭೀಮಾ ಹೇಮಾವತಿ ಕಪಿಲ ಘಟಪ್ರಭಾ ಲಕ್ಷ್ಮಣ ತೀರ್ಥ ಉಪನದಿಗಳು ಶರಾವತಿ ಅರ್ಕಾವತಿ, ಸುವರ್ಣ ವತಿಯಂತಹ ಕಿರು ನದಿಗಳು ಅರಿದು ಕನ್ನಡ ನಾಡನ್ನು ಪಾವನಗೊಳಿಸಿದ್ದಾರೆ.
ಇಲ್ಲಿ ಅನೇಕ ಗಂಗಾ ಕದಂಬ ಚಾಲುಕ್ಯ ರಾಷ್ಟ್ರಕೂಟ ಹೊಯ್ಸಳ ಮುಂತಾದ ರಾಜರು ಆಳಿ ಹೋಗಿದ್ದಾರೆ ಅವರು ಕಟ್ಟಿಸಿದ ಕೋಟೆ ಕೊತ್ತಲಗಳ ಅವಶೇಷವಾಗಿ ಇನ್ನೂ ಉಳಿದಿದೆ.
ಕಿತ್ತೂರ ಚೆನ್ನಮ್ಮ ನಂತಹ ವೀರ ಮಹಿಳೆ ಬ್ರಿಟಿಷ್ ಸಾಮ್ರಾಜ್ಯವನ್ನೇ ಅಲುಗಾಡಿಸಿದ್ದಾಳೆ, ಬೆಳವಡಿ ಮಲ್ಲಮ್ಮನಂತಹ ವೀರ ಮಹಿಳೆ ಶಿವಾಜಿಯ ವಿರುದ್ಧ ಕತ್ತಿ ಜಳಪಿಸಿದ್ದಾಳೆ ಇನ್ನೂ ಶಿಲ್ಪಕಲೆಗೂ ನಮ್ಮ ನಾಡು ಅತಿ ಹಿಂದೆಯೇ ವಿಶ್ವಾದ್ಯಂತ
ವಿಖ್ಯಾತವೆನಿಸಿತ್ತು ತುರಾ ಬಿರಾದಾರ್ ಎನಿಸಿಕೊಂಡಿದ್ದ ಲಾವಣಿಕಾರ ನೀಲಕಂಠಯ್ಯನವರು ರಚಿಸಿರುವ ಲಾವಣಿಯಲ್ಲಿ ಒಂದೆಡೆ ಹೀಗೆ ಹೇಳಿದ್ದಾರೆ ಒಳ್ಳೆ ವಿದ್ಯಾವಂತರೇ ಒಳ್ಳೆ ಬುದ್ಧಿವಂತರು ಯಾರು ಕಲ್ಲಿನಲಿ ಚಿತ್ರ ಕೊರೆದವರ ಆರ್ ನಾವಲ್ಲವೇ ನಮ್ಮ ಜನರಲ್ಲವೇ? ಎಂದಾಡಿ ಹೊಗಳಿದ್ದಾರೆ
ಇಷ್ಟೇ ಅಲ್ಲ ಶರಾವತಿ ನಮ್ಮ ನಾಡಿನ ಭಾಗೀರಥಿ ಇದ್ದಂತೆ ಬೆಳಕನ್ನ ನೀಡಿದ್ದಾಳೆ. ಇಲ್ಲಿ ಹಂಪೆ ಬೇಲೂರು ಹಳೇಬೀಡು, ಬಾದಾಮಿ, ಶ್ರವಣಬೆಳಗೊಳ ಐಹೊಳೆ ಪಟ್ಟದಕಲ್ಲು ಗುಹಾಂತರ ದೇವಾಲಯಗಳು ಕನ್ನಡ ನಾಡಿನ ಶಿಲ್ಪಕಲೆಯ ಖ್ಯಾತಿಗೆ ಅಪೂರ್ವ ನಿದರ್ಶನಗಳೇ ಆಗಿವೆ ಇನ್ನು ಸಾಹಿತ್ಯ ಕ್ಷೇತ್ರದಲ್ಲಿಯೂ ಕುವೆಂಪು ಮೊದಲಾದ ವರ ಕವಿಗಳು ಬಣ್ಣಿಸಿರುವಂತೆ ಪಂಪ ರನ್ನ ಪೊನ್ನ ಹರಿಹರ ರಾಘವಾಂಕ ಸೋಮೇಶ್ವರ ಬಸವೇಶ್ವರ ಅಲ್ಲಮ ಪ್ರಭು ಅಕ್ಕಮಹಾದೇವಿ ಲಕ್ಷ್ಮೀಶ ಕುಮಾರವ್ಯಾಸ ಮೊದಲಾದವರೆಲ್ಲರೂ ಕವಿಪುಂಗದವರ ಸಾಲಿನಲ್ಲಿ ಧ್ರುವತಾರೆ ಮಿನುಗುತ್ತಿದ್ದಾರೆ ವಿಜಯನಗರದ ಅರಸನ ಕಾಲದಲ್ಲಿ ಶಿಲ್ಪ ಕಲೆಗೆ
ಸಾಹಿತ್ಯ ಕಲೆಗೂ ಹೆಚ್ಚಿನ ಉತ್ತೇಜನ ನೀಡಲಾಗಿತ್ತು ಅದರಲ್ಲಿಯೂ ವಿಶ್ವ ವಿಖ್ಯಾತ ರಾಜನೆಣಿಸಿದ ಕೃಷ್ಣದೇವರಾಯ ಸ್ವತಃ ಕವಿ ಎನಿಸಿದ್ದು ಆತನು ಬರೆದಿರುವ ಅಮುಕ್ತ ಮೌಲ್ಯದ ಕೃತಿ ರಚನೆ
ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟುವಂತಿದೆ.
ಕನ್ನಡ ನಾಡಿಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಪಡುವಂತಾಗಿದೆ ಕುವೆಂಪು ಶಿವರಾಮ ಕೊರಂಟೈನ್ ದರಾ ಬೇಂದ್ರೆ ಮಾಸ್ತಿ ವಿ ಕೃ ಗೋಕಾಕ್ ಯು ಆರ್ ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ್ ಕಂಬಾರ್ ಇಂತಹ ಮಹಾನ್ ದಿಗ್ಗಜರನ್ನ ಹೊಂದಿದ ನಾಡಾಗಿದೆ.
ಇನ್ನು ಇಲ್ಲಿ ಗುಡ್ಡ ಘಟ್ಟ ಬೆಟ್ಟಗಳಿಂದ ಕೂಡಿ ವಿಶ್ರಾಂತ ಧಾಮಗಳೆನಿಸಿವೆ ಕಾಡುಗಳಿವೆ ಜೊತೆಗೆ ಅನೇಕ ಬೃಹತ್ ಕಾರ್ಖಾನೆಗಳನ್ನು ಹೊಂದಿದೆ ಇನ್ನು ಇಲ್ಲಿ ಪ್ರಮುಖವಾಗಿ ಗೋಧಿ ಭತ್ತ ರಾಗಿ ದ್ವಿದಳ ಧಾನ್ಯಗಳು ಜೋಳ ಹತ್ತಿ ಕೊಬ್ಬು ಮುಂತಾದವುಗಳನ್ನ ಬೆಳೆಯುತ್ತಾರೆ ಇಲ್ಲಿ ಒಳ್ಳೆಯ ಭೂಮಿ ಇದ್ದು ಕಾಲುವೆ ನದಿ ಮಳೆಗಳ ಮೂಲಕ ಬೆಳೆಯನ್ನ ಪಡೆಯುತ್ತಾರೆ. ರೈತರೇ ನಮ್ಮ ಬೆನ್ನೆಲುಬು.
ಅಷ್ಟೇ ಅಲ್ಲ ಇಲಿ ಚಿನ್ನ ಮ್ಯಾಂಗನೀಸ್ ಕಬ್ಬಿಣದ ಅದಿರು, ಕ್ರೋಮೈಟ್ ಅಬ್ರಕ ಗ್ರಾಫೈಟ್ ಮುಂತಾದ ಖನಿಜಗಳು ಸಿಗುತ್ತವೆ ಕನ್ನಡವೇ ಆಡಳಿತ ಭಾಷೆಯಾಗಿದೆ
ಇದರ ಕಾರಣ ಗೋಡಂಬಿ ಆಕಾರದಲ್ಲಿರುವ ಈ ಕರ್ನಾಟಕದ ಹಿನ್ನೆಲೆಯನ್ನ ನಾವು ಅರ್ಥ ಮಾಡಿಕೊಂಡಿರಬೇಕು ಅಲ್ಲವೇ?
1947 ನೇ ಆಗಸ್ಟ್ 15 ರಂದು ಭಾರತವು ಸ್ವಾತಂತ್ರ್ಯವನ್ನು ಪಡೆದ ನಂತರ 1956ನೇ ನವೆಂಬರ್ ಒಂದರಂದು ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಯಿತು ಆಗಲೇ ಕನ್ನಡ ಮಾತನಾಡುವ ಜನರಿರುವ ಭೂಭಾಗಗಳನ್ನು ಗುರುತಿಸಿ ಮೈಸೂರು ರಾಜ್ಯದ ರಚನೆ ಆಯಿತು
ಆಗಲು ಕವಿವಾಣಿಯಂತೆ ಹರಿದು ತುಂಡಾಗಿಹುದು, ನಮ್ಮ ಕನ್ನಡ ಮಾತು.
ನಾಡ ದೇವಿಯ ಕೂಗಿನ ರೂಪದಲ್ಲಿ ಜನನಾಯಕರ ಬಾಯಿಂದ ಹೊರ ಬರುತ್ತಲೇ ಇತ್ತು ಇಂದಿಗೂ ಕೇರಳದಲ್ಲಿರುವ ಕಾಸರಗೋಡು ಮೊದಲಾದ ಕನ್ನಡ ಭಾಷೆಯ ಜನರೇ ಹೆಚ್ಚಿರುವ ಭೂಭಾಗಗಳು ಕನ್ನಡ ನಾಡು ಎನಿಸಿರುವ ಕರ್ನಾಟಕಕ್ಕೆ ಸೇರಿರಬೇಕಿದೆ 1963 ರಲ್ಲಿ ದೇವರಾಜ ಅರಸರು ಮುಖ್ಯಮಂತ್ರಿ ಆಗಿದ್ದಾಗ ಅವರ ಆಳ್ವಿಕೆ ಸಮಯದಲ್ಲಿ ಮೈಸೂರು ರಾಜ್ಯವು ಕರ್ನಾಟಕ ಎಂಬ ಹೆಸರು ಪಡೆಯಿತು ಈ ಮೊದಲೇ ಈ ಹೆಸರು ಕರ್ನಾಟಕಕ್ಕೆ ಬಂದಿದ್ದರ ಬಗ್ಗೆ ಕವಿವಾಣಿ ಸಾಕ್ಷಿ ರೂಪದಲ್ಲಿದೆ ರಕ್ಷಿಸು ಕರ್ನಾಟಕ ದೇವಿಯ ಸಿರಿ ರಕ್ಷಿಸು ಕರ್ನಾಟಕ ದೇವಿ ದೇವರಾಜ ಅರಸರ ಶ್ರಮ ಹಾಗೂ ಬುದ್ಧಿವಂತಿಕೆಯಿಂದ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಯಿತು.
ಇಂದು ಈ ರಾಜ್ಯೋತ್ಸವ ಸಮಯದಲ್ಲಿ ಕನ್ನಡ ಕುವರರಾದ ನಾವೆಲ್ಲರೂ ಒಗ್ಗೂಡಿ ಅಂದಿನ ವಿಶಾಲ ಕರ್ನಾಟಕದ ಇಂದು ಕೈತಪ್ಪಿ ಹೋಗಿರುವ ಕನ್ನಡ ಭೂಭಾಗಗಳನ್ನ ಕರ್ನಾಟಕಕ್ಕೆ ಸೇರಿಸುವ ಕಾರ್ಯದಲ್ಲಿ ನಿರತರಾಗೋಣ ಕೈಯಾರ ಕಿಯಣ್ಣರೈ ಅವರಂತಹ ಕನ್ನಡ ನಾಡು ಹಾಗೂ ಕನ್ನಡ ಭಾಷಾ ಪ್ರೇಮಿಗಳಿಗೆ ನೆರವಿನ ರೂಪದಲ್ಲಿ ಹಸ್ತ ನೀಡಬೇಕಾಗಿದೆ ಕರ್ನಾಟಕದ ಬಹುಮುಖ್ಯಗಳ ಏಳಿಗೆಗೆ ಶ್ರಮಿಸಬೇಕಾಗಿದೆ ಇಂತಹ ಶ್ರಮ ಸಾರ್ಥಕವಾಗಬೇಕಾದರೆ ಸಾಧನೆಯು ಕೈಗೂಡಬೇಕಾದರೆ ಕನ್ನಡಿಗರೆಲ್ಲರೂ ಒಗ್ಗೂಡಬೇಕು ಕನ್ನಡವನ್ನೇ ನಮ್ಮ ಉಸಿರಾಗಿ ಮಾಡಿಕೊಂಡು ಭವ್ಯತೆಯ ಮನೋಭಾವದಿಂದ ರಾಷ್ಟ್ರೀಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ಚಟುವಟಿಕೆಗಳನ್ನ ಕ್ರಿಯಾತ್ಮಕ ರೀತಿಯಲ್ಲಿ ಮುನ್ನಡೆಯಬೇಕು ಆಗಲೇ ನಮ್ಮ ಕನ್ನಡ ಅಭಿವೃದ್ಧಿಯ ಬಗೆಗೆ ಕನಸುಗಳೆಲ್ಲವೂ ನನಸಾದೀತು.
ಪೂರ್ಣಿಮಾ ಕೆ.ಜೆ