ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ನೀ ಕದ್ದಿ ಮುದ್ದು ಮನಸ
ಕದ್ದೆಲ್ಲೊ ಈ ಮುದ್ದು ಮನವ
ಕಾಡಿ ಕಾಡಿ ನನ್ನ ತನುವ
ಗುಂಗ ಹಿಡಿಸಿ, ಸಂಗ ಬೇಡಿ
ಮರಿಸಿಬಿಟ್ಟೆಲ್ಲೊ ಜಗವ //ಪ//
ಮರೆಯದಂಗ ಕಣ್ಣಾಗ ನಿಂತಿ
ಅಳಿಸದಂಗ ಮನದಾಗ ಕುಂತಿ
ಹಚ್ಚಿ ಬಿಟ್ಟಲ್ಲೊ ನಿನ್ನ ಚಿಂತೆ
ಮಾಡಿಬಿಟ್ಟಿ ನೀ ಇಲ್ಲದ ಕೆಂತಿ//
ಹಾದಿ ತುಂಬಾ ಪ್ರೀತಿ ಹೂವ ಹಾಸಿ
ಹೆಜ್ಜೆ ಇಡುವಲ್ಲೆಲ್ಲ ಗಂದ ಸೂಸಿ
ಪ್ರೀತಿ ಮಾತ ಹೇಳಿ ನನ್ನ ರಮಿಸಿ
ನಿನ್ನ ಗುಂಗಿನಾಗ ನನ್ನ ಭ್ರಮಿಸಿ//
ನೆನಪಿನಾಗ ಬರಿ ನೀನ ತುಂಬಿ
ಮಾಡಿಬಿಟ್ಟೆ ನನ್ನ ಗೊಂಬಿ
ಮೈ ಮನಸಿಗೆಲ್ಲಾ ಆಗಿ ದುಂಬಿ
ಮಂಗನಂಗ ಹುಚ್ಚ ಏರಿಸಿಬಿಟ್ಟೆ ಕೊಂಬಿ//
ಮುತ್ತು ಕೊಟ್ಟಿ ಮರಿದಂಗ
ಒಲವ ಸುರಿದಿ ತೋರಿದಂಗ
ಕೈ ಹಿಡಿದಿ ಕೊಸರಿ ಹೋಗದಂಗ
ಬೆರೆತ ಉಸಿರ ಬಿಡಿಸಿದರ ಸಾಯೊವಂಗ//
ಸುತ್ತಿಸಿದಿ ಸಂತಿ ಪ್ಯಾಟಿ ಜಾತ್ರಿ
ಕನಸಿನ್ಯಾಗ ದಿನ ಬರುತಿ ಖಾತ್ರಿ
ಬೆಳೆಸಿಬಿಟ್ಟಿ ಬಿಡದಂತ ಗಟ್ಟಿ ಮೈತ್ರಿ
ಅಚ್ಚಾಕಿಸಿಬಿಟ್ಟಿ ಹೃದಯದಾಗ ನಿನ್ನ ಮೂರ್ತಿ//
ಡಾ ಅನ್ನಪೂರ್ಣ ಹಿರೇಮಠ
ಅತ್ಯಂತ ಅರ್ಥಪೂರ್ಣವಾಗಿ ಮನತುಂಬಿ ವಿವರಿಸಿದ ಪ್ರೇಮ ಭಾವ ಮೇ ಡಂ ಧನ್ಯವಾದಗಳು ತಮಗೆ