ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರ ಕವಿತೆ,’ನಮ್ಮೂರು ನವಿಲoಗೆ..’

ಅಂದದ ಚಂದದ ತವರೂರು
ಕಬ್ಬಿನ ಸಿಹಿಯಿದು ನಮ್ಮೂರು..
ಬಳುಕುವ ಬಳ್ಳಿಯ ನೋಟವಿದು
ಹೊನ್ನ ಪಚ್ಚೆ ಹಸಿರಿನ ಸೊಬಗಿದು..//

ನಮ್ಮ ಗಾವ ಚಂದನ ಬಲವು
ಗ್ರಾಮ್ಯ ನುಡಿಯೇ ಶ್ರೀಗಂಧವು..
ಹಳ್ಳಿಯ ಕಡೆ ಮಮತೆಯ ನಡೆ
ಕೂಡಿ ಬಾಳುವ ನವನೀತ ಗುಣವು..//

ನಗು ನಗುತ ನಲಿದು ಬಾಳೋಣ
ಖುಷಿಯಲಿ ಕೂಡಿ ನಡೆಯೋಣ..
ಬೆಳೆದ ಧಾನ್ಯದ ರಾಶಿಯ ಮಾಡಿ
ಭೂತಾಯಿಗೆ ಹಾಡಿ ನಮಿಸೋಣ..//

ನಮ್ಮೂರ ಚೆಲುವಿನ ಐಸಿರಿ
ಸೊಗಡು ಕಂಪಿನ ವನಸಿರಿ..
ಬಾಳಿನ ಗುಡಿ ಅರಮನೆಯಂಗೆ
ಬಾಳಕ್ಕೆ ಕುಣಿವ ನವಿಲoಗೆ..//


4 thoughts on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರ ಕವಿತೆ,’ನಮ್ಮೂರು ನವಿಲoಗೆ..’

    1. ನಿಮ್ಮೂರ ಕವನ ಬಹಳ ಸೊಗಸಾಗಿ ಕಬ್ಬಿನ ಸಿಹಿ ಹಂಚಿದ ಕವಿತೆ

Leave a Reply

Back To Top