ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೂರು ನೀಡಬೇಕಾಗಿದೆ
ದೇವರಿಗೆ !
ಹೇಳು ಗೆಳೆಯಾ
ಎಲ್ಲಿದ್ದಾನೆ ದೇವರು ?

ಬಾಯಿ ಬಡುಕರ,
ಬಡವರ ರಕ್ತ ಹಿರುವವರ
ವಿರುದ್ದ ದೂರು
ನೀಡಬೇಕಾಗಿದೆ !

ಅಧಿಕಾರದ ಅಹಂನಲ್ಲಿರವವರ,
ದುಡ್ಡಿನ ದರ್ಪ ತೋರುವವರ
ವಿರುದ್ಧ ದೂರು
ನೀಡಬೇಕಾಗಿದೆ !

ಅಡ್ಡ ದಾರಿ ಹಿಡಿದು
ಸಿರಿವಂತರಾದವರ,
ಮಾನವೀತೆಗೆ
ಬೆಲೆ ಕೊಡದವರ
ವಿರುದ್ಧ ದೂರು
ನೀಡಬೇಕಾಗಿದೆ !

ಹೇಳು ಗೆಳೆಯಾ
ಎಲ್ಲಿದ್ದಾನೆ ದೇವರು?
ಮಂದಿರದಲ್ಲಿದ್ದಾನೆಯೇ ?
ಮಸೀದಿಯಲ್ಲಿದ್ದಾನೆಯೇ ?
ಚರ್ಚಿನಲ್ಲಿದ್ದಾನೆಯೇ ?
ಹೇಳು ಗೆಳೆಯಾ !


About The Author

1 thought on “ನಾಗಪ್ಪ ಸಿ ಬಡ್ಡಿ ಅವರ ಕವಿತೆ-ದೂರು ನೀಡಬೇಕಾಗಿದೆ !”

Leave a Reply

You cannot copy content of this page

Scroll to Top