ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
‘ಹಿತ ಶತ್ರುಗಳು’
ಜೊತೆಗೆ ಉಂಡಿ
ಜೊತೆ ಜೊತೆಗೆ
ತಿರುಗಾಡಿ
ಜೊತೆಯಲ್ಲೇ
ಇದ್ದುಕೊಂಡು
ದ್ರೋಹ ಬಗೆದರು
ಒಂದಿಷ್ಟು ಜನ
ಬೆನ್ನ ಹಿಂದೆ
ಆಡಿಕೊಂಡು ನಕ್ಕವರು
ಇನ್ನೊಂದಿಷ್ಟು ಜನ
ಎದಿರು ಚೆಂದಗೆ
ಮಾತನಾಡಿಕೊಂಡಿದ್ದು
ಬೆನ್ನಿಗೆ ಇರಿದವರು
ಅದೆಷ್ಟೋ ಜನ
ನಗುನಗುತ
ಮಾತನಾಡುತ್ತಲೇ
ನೇರವಾಗಿ ಎದೆಗೇ
ಇರಿದವರೊಂದಿಷ್ಟು ಜನ
ಯಾರೂ ಬೇರೆಯವರಲ್ಲ
ಹೊರಗಿನವರೂ ಅಲ್ಲ
ಎಲ್ಲರೂ ನಮ್ಮವರೇ
ನಮ್ಮ ಹಿತ ಶತ್ರುಗಳೇ
ಕಣ್ಣಿಗೆ ಮಂಕುಬೂದಿ
ಎರೆಚಿದವರೆ
ತಮ್ಮ ಬೇಳೆಯ
ಬೇಯಿಸಿಕೊಂಡವರೆ
ತಮ್ಮ ಸ್ವಾರ್ಥಕ್ಕಾಗಿ
ನಮ್ಮನ್ನು ತುಳಿದವರೆ
ಸದಾ ನಮ್ಮ ಹಿತ
ಚಿಂತಕರಂತೆ
ಓಡಾಡಿಕೊಂಡಿದ್ದವರೆ
ನಮ್ಮ ಬುಡಕ್ಕೆ ಗೊತ್ತೇ
ಆಗದಂತೆ ಕೊಳ್ಳಿ ಇಟ್ಟವರೆ
ಎಲ್ಲರಿಗಿಂತ ಮೊದಲು ಬಂದು
ಸಾಂತ್ವಾನವ ಹೇಳಿದವರೇ
ನಾಗರಾಜ ಜಿ. ಎನ್. ಬಾಡ
ಅರ್ಥಪೂರ್ಣ ಕವನ ಸರ್
……ಶುಭಲಕ್ಷ್ಮಿ