ಡಾ.ರೇಣುಕಾತಾಯಿ.ಸಂತಬಾ. ರೇಮಾಸಂ ಅವರ ಕವಿತೆ’ಕಾರಣ ಕೇಳಿ…..’

.

ಕಾರಣ ಕೇಳುವೆ ನಿನಗೆ ದೂರ ಹೋಗಲು
ಒಂದು ಮಾತನು ಆಲಿಸುವೆಯಾ ಹೋಗುವ ಮೊದಲು ll

ಮರೆತು ಬಿಡೆಂಬ ಶಬ್ದವು ನೀ ಹೇಳಲು
ಬೆರೆತ ಒಂದಾದ ಮನವು ನೀ
ಬಿಡಲು
ಎದೆಯಲಿ ಹಚ್ಚಿದ್ದೆ ನೀ ಒಲವಿನ ಹಣತೆ
ಬರೆಯುತ್ತಿದ್ದೆ ಪದೇಪದೇ ನಿನ್ನದ್ದೇ ಕವಿತೆ ll

ಸಿಹಿ ಕಹಿ ಭಾವಗಳಿಗೆಲ್ಲ ನಾದವಾಗಿದ್ದೆವು
ಕನಸಿನ ಮನೆಯನು ಒಂದಾಗಿ ಕಟ್ಟಿದ್ದೆವು
ನಾ ಸ್ವರವಾಗಿ ಹಾಡಿದ್ದೆ ನಿನ್ನ
ರಾಗದಿ
ಇಂದ್ಯಾವ ಅಳಲಿನಲಿ ನೀ ಮೌನವಾದಿ ll

ನೀ ನೆಟ್ಟ ಮಲ್ಲಿಗೆ ಹೂ ಬಿಡುವ ಹೊತ್ತಿಗೆ
ಹೀಗೇಕೆ ಚಿವುಟಿದೆ ಚಿಗಿಯದ ಹಾಗೆ
ಒಲವ ಬಂಧನವು ಬಂಧಿಸಿತೆನ್ನ ಪಾಲಿಗೆ
ಯಾವ ಬಂಧ ತೊಡರಿದೆ ಈ ನಿನ್ನ ಕಾಲಿಗೆ ll


Leave a Reply