ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’

ಮೆಲ್ಲನೆ ಹೃದಯ ಸ್ಪರ್ಶಿಸಿ,
ಕಣ್ಣಿಂದ ಗಮನಿಸಿ,
ಮನದಲ್ಲಿ ಹುಟ್ಟಿ,
ಈ ಕನಸುಗಳು ಗುರಿಯಾಗಿ ನಿಂತಿವೆ.

ಸತತ ಪ್ರಯತ್ನ,
ಆತ್ಮ ಬಲ ದೊಂದಿಗೆ
ಜ್ಞಾನದ ಬೆಳಕು,
ಮನದ ಅಂಗಳದ ದೀಪವಾಗಿದೆ.

ಈ ಗುರಿ ಬೆಂಕಿಯಂತೆ ಉಜ್ವಲಿಸಿ,
ಗುರಿ ತಲುಪಿದ ಮೇಲೆ,
ದೀಪದಂತೆ ಈ ಜಗತ್ತಿಗೆ ಬೆಳಕಾಗಲಿ.

ಇದು ನನ್ನ ಕನಸು,
ಇದು ನನ್ನ ಗುರಿಯಾಗಿದೆ.


7 thoughts on “ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’

  1. ಅತ್ಯುತ್ತಮ ಭಾವನಾತ್ಮಕ ಅಭಿವ್ಯಕ್ತಿಯ ಸುಂದರ ಕವನ ಮೊದಲ ಪ್ರಯತ್ನ ಅಭಿನಂದನೆಗಳು

  2. ಇದನ್ನು ಓದುತ್ತಾ ಓದುತ್ತಾ ನನ್ನ ಕನಸುಗಳು ಕವನ ನೆನಪಾಯ್ತು… ಸರಳ ಸುಂದರವಾದ ಕವನ

    ಸುಶಿ

Leave a Reply

Back To Top