ಕಾವ್ಯ ಸಂಗಾತಿ
ಸುಮಶ್ರೀನಿವಾಸ್
ಅವನೆಂದರೆ ಹಾಗೆ!
ಬಿರುಬಿಸಿಲಿಗೆ ತಂಪು
ಕೊರೆವ ಚಳಿಗೆ ಬಿಸಿ
ಮಾತಿಗೆ ಮೌನ
ಮೌನಕೆ ಮಾತು
ಸುರಿವ ಸೋನೆಗೆ
ನನ್ನೆದೆಯ ಸಂಗೀತ
ಹರಿವ ಕಣ್ಹನಿಗೆ
ಬೆರಳ ಸಾಂತ್ವನ
ತೆರೆದ ಮನಕೆ
ಲಗ್ಗೆಯಿಟ್ಟ ನಗು
ಸರಿದ ಕ್ಷಣಗಳಿಗೆ
ನವಿರಾದ ನೆನಪು
ಹುಣ್ಣಿಮೆಯ
ಹಾಲ ಬೆಳಕು
ಕವಿದ ಕತ್ತಲೆಗೆ
ದುಂಭಿಯ ಝೇಂಕಾರ
ಉಸಿರಿಗೆ ದೇಹ
ಒಲವಿಗೆ ದಾಹ
ಕಾದಷ್ಟೂ ಘಮ
ಬಿರಿದಷ್ಟು ಸಿಹಿ
ಅವನೆಂದರೆ ಹಾಗೆ…
ಬೈಗು ಬೆಳಗಿಗು ಸೊಬಗು
ಒಲವಿಗೇ ಒಲವು
ಚೆಲುವಿಗೇ ಚೆಲುವು
ಪ್ರೇಮದ ಪುತ್ಥಳಿ ಅವನು…..
ಸುಮಶ್ರೀನಿವಾಸ್
Super