ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಅವರ ಕವಿತೆ-ಅಭಯ ಮೂರುತಿ

ನಸೆ ಏರಿದ ಪ್ರೀತಿಯಲಿ
ಸೋತಿರುವೆ ಜೀವವೇ
ಕೆದಕದಿರು ಮತ್ತೆ ಮತ್ತೆ
ಅಳುವ ಮೋರೆಯ ಹೊತ್ತು
ಬರುವೆ ನಿನ್ನ ಅಡಿಗೆ
ವಂದಿಸುವೆ ಶಿರ ಬಾಗಿ
ಹರಸೆಂದು

ಬೇಗುದಿಯ ಜೀವಕೆ
ಬಳಲಿಕೆಯು ಎನಗೆ
ಬಸವನಾಡಿಸಿದಂತೆ
ನಡೆವೆ ಜಗದಲಿ
ಕಲ್ಲಿರಲಿ ಮುಳ್ಳಿರಲಿ
ತಗ್ಗು ದಿನ್ನೆಯಿರಲಿ
ಎದ್ದು ನಡೆಯುವೆ
ಜಗದಲಿ

ನಾ ನಡೆವ ದಾರಿಗೆ
ನೆರಳಂತೆ ನೀ ನಿರುವೆ
ಸೋಲಿಲ್ಲ ಎನಗೆ
ಬದುಕಲಿ
ಇರುಳೆಲ್ಲ ಹಗಲು
ಹಗಲೆಲ್ಲ ಇರುಳು
ದುಡಿದ ಜೀವಕೆ
ಮತ್ತೆ ಪ್ರಶ್ನಿಸದಿರು
ಎಲೆ ಜೀವವೇ

ಜೀವವಾಗಿದೆ ತನು
ಸತ್ತಂತೆ ಬದುಕಿ
ಉಳಿದಿದೆ ಬವನೆ ನೀಗಿ
ಜೊತೆ ಸಾಗು
ನೆರಳಂತೆ ನಲಿಯುವೆ
ಹೇ ಭಗವಂತ
ಮನ್ನಿಸು ಎನ್ನನು
ಅಭಯ ಮೂರುತಿ


Leave a Reply

Back To Top