ಬಡಿಗೇರ ಮೌನೇಶ್ ಅವರ ಕವಿತೆ-ನನ್ನವ್ವನ ಹಾಗೇ ಇವಳು

ನನ್ನವ್ವನ ಹಾಗೇ ಇವಳು
ತಾಯ್ತನದ ಅಂತಃಕರಣ
ಮುಖ ನೋಡಿದರೆ ಸಾಕು
ಮರುಗುವ ಮಾತೃ ಹೃದಯಿ

ಮನೆ ತುಂಬಿದಾಗಿವಳು
ಮನವ ತುಂಬಿ ಬೆಳಕಾದಳು
ನನ್ನ ನಾಳೆಯ ಭರವಸೆ
ಸುಂದರ ಕನಸುಗಳ ರೆಕ್ಕೆ ಇವಳದೇ

ಹರಳು ಹುರಿದಂಥ
ತೀಕ್ಷ್ಣ ಮೊನಚಿನ ಮಾತಿನವಳು
ಸಂಗೀತ ಶಾರದೆಯ ಸ್ವರೂಪ
ಮೃದು ಮಧುರ ರಾಗಾಲಾಪ

ಮಾತು ಮಾತಿಗೂ ಪ್ರಶ್ನೆ ಹಾಕುವ
ಶಿಕ್ಷಕಿ ಇವಳು
ಉತ್ತರಿಸಲು ತಡಕಾಡುವ
ವಿದ್ಯಾರ್ಥಿ ನಾನು

ಆಗಾಗ ನನ್ನನರಸಿ
ನನ್ನೆದೆಯ ತಬ್ಬುವ ಗುಬ್ಬಿಮರಿ
ಸಿಹಿಮುತ್ತಿನ ಮಳೆ ಸುರಿಸುವ
ಚಿನಕುರುಳಿ

ಬದುಕಲ್ಲಿ ಇವಳಿಂದ
ಕಲಿತದ್ದು ತುಂಬಾ…
ಪಡೆದದ್ದು ಅಗಣಿತ…
ತಾಳ್ಮೆ, ಪ್ರೀತಿ…..

ಅವ್ವ ಕಲಿಸಿದ ಪಾಠ,
ಪಟ್ಟ ಪಾಡು ಒಂದೆರಡಲ್ಲ
ಮಗಳಾದರೂ ಈಗೀಗ
ಕಲಿಯುತ್ತಿದ್ದೇನೆ ಇವಳಿಂದ.
ಅದಕ್ಕೇ ಇವಳು
ಥೇಟ್ ನನ್ನವ್ವನ ಹಾಗೇ!…


4 thoughts on “ಬಡಿಗೇರ ಮೌನೇಶ್ ಅವರ ಕವಿತೆ-ನನ್ನವ್ವನ ಹಾಗೇ ಇವಳು

  1. ಥೇಟ್ ಒಳ್ಳೆಯ ಕವನದ ತರಹ ಐತಿ ಬ್ರದರ್..
    ಅಭಿನಂದನೆಗಳು

Leave a Reply

Back To Top