ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ತಿರುವು ಮುರುವು

ಜೋಕೆ ಬೀಳದಿರು ಜಾರಿ
ತಿರುವು ಮುರುವು ದಾರಿ
ಪಯಣಿಸಬೇಡ ಹೆದರಿ
ಅಪಘಾತಕ್ಕಿಡಾಗುವ ಪರಿ

ಬಾಳಿನಲ್ಲೂ ಎದುರಿಸಲು
ಬರುವ ಎಡರು ತೊಡರುಗಳು
ಶಾಂತಿಯಿಂದ ಮೀರಿಸಲು
ಬೀಡಿದೆ ಬರುವ ಸವಾಲು

ಭೂಮಿಗೆ ಹುಟ್ಟಿ ಬಂದ ಮೇಲೆ
ವ್ಯರ್ಥವಾಗದ ಸಮಯದ ಬೆಲೆ
ಅರಿತು ಅರಳಿಸುವ ಕಲಿತಕಲೆ
ಸಿಗುವದೊಂದು ದಿನ ಸುಂದರ ಸೆಲೆ

ಮರ್ಕಟವೆಂಬ ಮನಸ್ಸಿನ ಗೂಡ
ತಿರುಗಿ ಕೆಡುವ ಜೀವನದ ಪಾಡ
ಸಜ್ಜನರ ಸಂಗ ಪಯಣಿಸಿ ನೋಡ
ಸುಖದಿ ಸೇರುವೇ ಜೀವನದ ದಡ


Leave a Reply

Back To Top