ಗಾಯತ್ರಿ ಎಸ್ ಕೆ ಅವರ ಕವಿತೆ-ಎಂಥ ಚಂದ

ನೆನಪುಗಳು ಸ್ವಾಗತ
ಬಯಸುವಂತೆ
ಹೊಸ ಆಸೆ ಕನಸುಗಳು
ಬಿತ್ತುವಂತೆ

ಬಿಡದೆ ಒತ್ತುವವು
ನೆನಪು ಮಾಡುವವು
ಘಳಿಘಳಿಗೆಯ ಚೇತರಿಕೆಯವು
ಕನಸ ಹೊತ್ತಿರುವವು

ಬೆಳೆಯುವೆವು ಕನಸಿನಲ್ಲಿ
ಹೊಂಗನಸಿನ ತೀರದಲ್ಲಿ
ಹೊಸ ಆಸೆ ಭರವಸೆಯ
ಬೆಳಕಿನಲ್ಲಿ

ಚಂದ ಚಂದ ನವಿಲುಗಳು
ಹಾರಾಡುವ ಹಕ್ಕಿಯು
ಮುಗಿಲ ನೇರ ಬದುಕಿಗೆ
ಹತ್ತಿರ ಎಲ್ಲವೂ,.


Leave a Reply

Back To Top