ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಎಲ್ಲಿಂದ ಬಂತು ಈ ಜಾತಿ

ಎಲೆ ನಕ್ಷತ್ರವೇ ಹೊತ್ತು ತಿರುಗುವ ನಿನ್ನ ಹೇಸಿಗೆಯ ಕುಲ ಇಂದು ಇಳಿದು ಬಂದಿದೆ ಮತ್ತೆ
ನೀ ತೊಳೆದು ಹೋದ ಹೇಸಿಗೆ
ಹೊಲಸು ಜಾತಿ ಗಬ್ಬೆದ್ದು ನಾರುತ್ತಿದೆ
ಹೆಸರಿಗೆ ಮಾತ್ರ ಲೆಕ್ಕಾಚಾರ
ಇವರು ತೊಡುವ ಬಟ್ಟೆಗೆ
ತೇಪೆ ಹಚ್ಚಿ ಬಿಳಿ ಬಟ್ಟೆಯ ಮೇಲೆ
ಕಪ್ಪು ಕಲೆಯನ್ನು ತೊಳೆಯುವ
ದೋಬಿಗೇನು ? ಗೊತ್ತು
ಎಲ್ಲಿ ಮಲಗಿ ಬಂದ ನಿನ್ನ ಹೊಲಸು
ಬಟ್ಟೆಯ ಕಲೆಯನು
ನಾನು ತೊಳೆದು
ತೊಡೆಸುತ್ತಿರುವೆ ನಿನಗೆ
ಅನ್ನುವುದು ಪಾಪ ಅವನಿಗೂ ಗೊತ್ತಿಲ್ಲ
ನಾರುವ ನಿನ್ನ ಕರವಸ್ತ್ರ ಕೆ ಅಂಟಿದ
ಶ್ರೀಗಂಧದ ವಾಸನೆ
ನಸೆ ಏರಿ ಮೈ ಮರೆತು ಮಲಗಿದ
ನಿನ್ನ ಕೈ ಕಾಲು ಒರೆಸುವ
ಕರಗಳು ಅದಾವದೋ ಹೊಲಸು ಕೈಗಳನು ತೊಳೆದು ಬಂದು
ಒತ್ತುತ್ತವೆ ಎನ್ನುವುದು ನಿನಗೂ
ಗೊತ್ತಿಲ್ಲ
ಇದೇ ಅಲ್ಲವೇ ? ನಮ್ಮ ನಿಮ್ಮ ಯ ಜಾತಿ ಕುಲ ಎಲ್ಲಿಂದಲೋ ಹುಟ್ಟಿ ಬಂದ ನಿನ್ನ ಹುಟ್ಟು ಸ್ಥಳವನ್ನು ಒಮ್ಮೆ ಅವಲೋಕಿಸಿ ನೋಡು
ಎಚ್ಚರಿಸಿದ ರೋಗಗಳು ಮುಟ್ಟಲೊಲ್ಲವು ನಿನ್ನ ಕೈಗಳನ್ನು
ನಿನ್ನ ಮುಟ್ಟದೇ ಪವಿತ್ರ ಆಗಿರಬೇಕೆಂದು ಕೊಸರಿಕೊಂಡ ನನ್ನ ಪವಿತ್ರ ಕೈಗಳು
ಈಗ ಮಲೀನ ವಾಗಿವೆ
ಗಬ್ಬೆದ್ದು ನಾರುವ ಅಂಗೈ ಗುಣ್ಣಿಗೆ ಗೊತ್ತಿಲ್ಲ ಅದಾವೂದೋ ಹೊಲಸು ಕೈಗಳ ಕುಲುಕಿ ತಲೆ ಬಾಚಿಕೊಂಡ ನೋವು ಪಾಪ
ಬೆರಳಿಗೇನು ?ಗೊತ್ತು
ಮಲೀನವಾದ ಅದು ಬೆವರ ಹನಿಯೊಡೆದು ಗಬ್ಬೆದ್ದು
ನಾರುತ್ತಿದೆ ಎಂದು
ಬೋರ್ಗರೆದ ಮಳೆರಾಯ ಒಮ್ಮೆ ಗುಡುಗಿ ಬಿಟ್ಟ ಗಢಗಢ ಎಂದು
ಮಿಂಚೊಂದು ಅಡ್ಡ ಬಂದು ಎಚ್ಚರಿಸಿದ ಮಲಗಿದ ಮನಗಳು
ಭಯಭೀತರಾಗಿ ಎದ್ದು ಓಡಿದ ಸುದ್ದಿ ಕೇಳಿ ಹೌಹಾರಿ ಹೋದೆ.


One thought on “ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಎಲ್ಲಿಂದ ಬಂತು ಈ ಜಾತಿ

Leave a Reply

Back To Top