ನಾಗರಾಜ ಜಿ. ಎನ್. ಬಾಡ ಅವರ ಕವಿತೆ’ಸಮಯ’

ನನ್ನೊಳಗೆ ಉಳಿದು ಬಿಡು
ನಗುವಾಗಿ ಗೆಲುವಾಗಿ
ಮನದ ಮಾತಾಗಿ
ಬದುಕಿಗೆ ಸ್ಪೂರ್ತಿಯಾಗಿ
ನನ್ನೊಳಗಿನ ಬೆಳಕಾಗಿ

ಮತ್ತೆ ಮತ್ತೆ ಬರಲಾರದು
ಮರಳಿ ಸಿಗಲಾರದು ಈ ಸಮಯ
ಎಂದಿಗೂ ಮರೆಯದು ಸವಿ ಸವಿ
ನೆನಪುಗಳ ಈ ಹೃದಯ
ಹೀಗೆ ಇರಲೆಂದು ಬಯಸುವೆನು
ಈ ಸನಿಹ ಈ ಜೀವನ

ಸುಖವಾಗಲಿ ದುಃಖವಾಗಲಿ
ಇಂದು ಈ ಕ್ಷಣವಷ್ಟೇ
ನಿತ್ಯ ನಿರಂತರವಲ್ಲ
ನಮ್ಮ ಪಯಣವು
ಸಾಗುತ್ತಲೇ ಇರಬೇಕು
ಎಲ್ಲವನ್ನೂ ಮರೆಯಬೇಕು
ಎಲ್ಲರೊಡನೆ ಬೆರೆಯಬೇಕು
ಇರುವುದನ್ನ ಆಸ್ವಾದಿಸಬೇಕು

ಈ ದಿನ ಈ ಕ್ಷಣಗಳನ್ನು
ಖುಷಿ ಖುಷಿಯಾಗಿ ಕಳೆಯಬೇಕು
ನೋವುಗಳನ್ನ ಮರೆಯಬೇಕು
ನೆಮ್ಮದಿಯ ಪಡೆಯಬೇಕು
ಬದುಕಿನ ಪಯಣವನ್ನು
ನಗುನಗುತಾ ಮುಗಿಸಿಬಿಡಬೇಕು–


Leave a Reply

Back To Top