ಅಬ್ದುಲ್ ಹೈತೋರಣಗಲ್ಲುರವರ ಕೃತಿಗಳಾದ ಕುಲಾಂತರಿ ಮತ್ತು ‘ಮುಳ್ಳಪ್ಪಿದ ಮೌನ’ ಬಿಡುಗಡೆ

ಬಳ್ಳಾರಿಯ ಪತ್ರಕರ್ತ ಮನಸುಗಳಿಗೆ ವಂದನೆಗಳು.

ಕಾವ್ಯಮನೆ ಪ್ರಕಾಶನ ಬಳ್ಳಾರಿ .ಕವಿಗಳಾದ ಅಬ್ದುಲ್ ಹೈ.ತೋರಣಗಲ್ಲು ರವರ ಪುಸ್ತಕಗಳಾದ ಕುಲಾಂತರಿ ಕೂಸು ಮತ್ತು ಮುಳ್ಳಪ್ಪಿದ ಮೌನ ಬಿಡುಗಡೆಗೊಂಡವು. ತಾವೆಲ್ಲಾ ಬಂದಿರಿ. ಕಾರ್ಯಕ್ರಮಕ್ಕೆ ಕಳೆನೀಡಿದಿರಿ. ನಿರೂಪಕರ ಗೈರಿನಲ್ಲಿ ಮುರಾರ್ಜಿದೇಸಾಯಿ ಉಪನ್ಯಾಸಕರಾದ ಡಾ. ನಾಗರಾಜ ರವರು ಆ ಕೊರತೆ ನೀಗಿಸಿದರು. ಶ್ರೀಮತಿ ಲಕ್ಷ್ಮಿ ಪವನ್ ಕುಮಾರ್ ಮೇಡಂ. ಗಾಂದಿಸ್ತುತಿ ಮತ್ತು ಜಿ.ಎಸ್.ಎಸ್ ರವರ ಹಾಡು ಹಾಡಿ ಶುಭಾರಂಭಿಸಿದ ಸಭೆಗೆ ವಕೀಲರಾದ ಶ್ರೀ ಹಾರಕಬಾವಿ ತಿಪ್ಪೇಸ್ವಾಮಿ ಯವರು ಸ್ವಾಗತಿಸಿದರು. ಗಿಡಕ್ಕೆ ನೀರು ಹಾಕಿ ಉದ್ಘಾಟಿಸುವುದರೊಂದಿಗೆ ಪುಸ್ತಕ ಜನಾರ್ಪಣೆಯನ್ನು ಅಖಂಡ ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಸರ್ ನೆರವೇಸಿದರು. ಈ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕರು (ಅಂಬೇಡ್ಕರ್ ವಾದ) ಹಾಗು ಸಾಹಿತ್ಯ ಪ್ರೇಮಿಯಾದ ಶ್ರೀ ಹೆಚ್. ಹುಸೇನಪ್ಪ ಕವನ ಸಂಕಲನ ಪರಿಚಯಗೊಳಿಸಿದ ಚಿಂತಕರು ಮತ್ತು ವಿಮರ್ಶಕರಾದ ಡಾ. ಶ್ರೀನಿವಾಸ ಮೂರ್ತಿ ಗಜಲ್ ಸಂಕಲನ ಪರಿಚಯಿಸಿದ ಯುವ ಗಜಲ್ಕಾರ ಸಿಕಂದರ್ ಮೀರಲಿ ಹಾಗು ಕೃತಿಕಾರ ಅಬ್ದುಲ್ ಹೈ ತೋರಣಗಲ್ಲು ರವರು ಜೊತೆಯಾಗಿದ್ದರು.

ಶ್ರೀನಿವಾಸ ಸರ್ ರವರ ಪುಸ್ತಕ ಪರಿಚಯ ಅದ್ಭುತ. ಕೇಳುಗರು ಭಾವದೊಡಲಲಿ ತೇಲಿ ಹೋದರು. ನನ್ನ ಸಂಕಲನಕ್ಕೆ ಮೆರಗು ಮೂಡಿಸಿದ ಅವರ ಪರಿಚಯದ ವಿಧಾನ ಎಲ್ಲರೆದೆ ಆಳಿತು.
ಗಜಲಿನ ಘಮಲೇ ಹಾಗೆ. ಉರ್ದು ಶೇರ್ ಶಾಯಿರಿಯ ಮೂಲಕ ಸಿಕಂದರ್ ರವರು ಸುಂದರ ಪರಿಚಯಮಾಡಿದರು.

ಇಬ್ಬರು ಸಾಧಕಲ್ಲೊಬ್ಬರಾದ ಕವಯತ್ರಿ ಉತ್ತಮ ಶಿಕ್ಷಕಿಯರಾದ ಶ್ರೀಮತಿ ಈರಮ್ಮ ಹಾಗು ಸದಾ ಕನ್ನಡ ಉಸಿರಾಡುವ ಉತ್ತಮ ಸಂಘಟಕರುˌ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಶ್ರೀ ನಾಗರೆಡ್ಡಿ ರವರಿಗೆ ಶಾಲು ಹಾರ ಹಾಗು ಐದು ಬಗೆಯ ತರಕಾರಿ ಮತ್ತು ಐದು ಬಗೆಯ ಸಿರಿಧಾನ್ಯ ಕೊಟ್ಟು ಸನ್ಮಾನಿಸಲಾಗಿದ್ದು ವಿಶೇಷ.

ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಬಳ್ಳಾರಿಯ ಹಿರಿಯ ಕವಿಗಳು ಚಿಂತಕರಾದ ಸಾಹಿತಿ ಶ್ರೀ ಅಜಯ ಬಣಕಾರ್. ಗೋಷ್ಠಿಗೆ ಚಾಲನೆ ನೀಡಿದ ಬಳ್ಳಾರಿಯ ಹಿರಿಯ ಚೇತನ ದಲಿತ ಬಂಡಾಯ ಕವಯತ್ರಿ ಎನ್.ಡಿ. ವೆಂಕಮ್ಮ ಗೋಷ್ಠಿಗೆ ಕಳೆ ತಂದು ಕೊಟ್ಟರು.
ಸುಮಾರು 16 ಜನ ಕವನವಾಚನ ಮಾಡಿದ್ದು ವಿಶೇಷ.

ಇಡೀ ಕಾರ್ಯಕ್ರಮದ ಬೆನ್ನ ಹಿಂದಿನ ಬೆಳಕಾಗಿ ಸಹಕರಿಸಿದ ಬಳ್ಳಾರಿಯ ಖ್ಯಾತ ಸಾಹಿತಿˌ ಚಿಂತಕ  ಶ್ರೇಷ್ಠ ವಾಗ್ನಿಗಳಾದ ಶ್ರೀ ಪಿ.ಆರ್. ವೆಂಕಟೇಶ್. ರವರ ಸಹಕಾರ ನೆನೆಯುವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಸಿ.ಬಿ. ಚಿಲ್ಕರಾಗಿ ರವರ ಉಪಸ್ಥಿತಿ ವೇದಿಕೆಯ ಘನತೆಯನ್ನು ಹೆಚ್ಚಿಸಿತು.

ಡಾ. ವಿಷ್ಣುವರ್ಧನ್ ವೇದಿಕೆಯ ಸಂಸ್ಥಾಪಕ ರಾದ ಅಜಯ್ ಬಣಕಾರ್  ಮತ್ತು ಅವರ ಶ್ರೀಮತಿಯರಾದ ವಾಣಿ ಅಜಯ್ ಬಣಕಾರ್  ಮಗ ಕರ್ಣ ತಮ್ಮದೇ ಕಾರ್ಯಕ್ರಮದ ತರಹ ಇಡೀ ಕಾರ್ಯಕ್ರಮದಲ್ಲಿ ತೊಡಗಿದ್ದು ನಾನೆಂದು ಮರೆಯದ ಪ್ರೀತಿಯಾಗಿತ್ತು. ಮನೆಗೆ ಹೂನಗೆ ಎಂದು ಹೆಸರಿಟ್ಟಿದ್ದು ನಿಜವಾಗಿಯೂ ಹೂನಗೆಯ ವಾತಾವರವಿತ್ತು. ಈ ವಾತಾವರಣದಲ್ಲಿ ನಡೆದ ಕವಿಗೋಷ್ಠಿ ರಂಜನೀಯವಾಗಿತ್ತು.

ಕವಿಗಳಾದ ಅಂಕಲಿ ಬಸಮ್ಮ ; ಶೇಷಣ್ಣ ಸಿ; ಎಂ.ಪಿ.ಎಂ ವೀರೇಶ ಸ್ವಾಮಿˌ ವೀರೇಂದ್ರ ರಾವಿಹಾಳ್ˌ ಬಿ.ಅರುಣ್ ಕುಮಾರ್ˌ ಡಾ. ಸುಮಾ ಬಳ್ಳಾರಿˌ ನಾಗರಾಜ ಮಸೂತಿˌ ಜಾಧವ್ ಜೀ; ಉಮಾ ಮಹೇಶ್ˌ ಆಂಜನೇಯˌ ಡಾ.ವೀರೇಶ್ ಕುಮಾರ್ˌ ಬಿ.ವಿ.ನಾಯಕ್ˌ ಹಾರಕಬಾವಿ ತಿಪ್ಪೇಸ್ವಾಮಿˌ ಡಾ. ಸಿ.ಬಿ. ಚಿಲ್ಕರಾಗಿ… ಅತ್ಯುತ್ತಮ ಕವನ ವಾಚನ ಮಾಡಿದರು.

ವಿಶೇಷವೆಂದರೆ 80 ರ ಹರೆಯದ ಸಂಡೂರು ತಾಲೂಕಿನ ತಾಳೂರು ಗ್ರಾಮದ ಬಯಲಾಟದ ಕಲಾವಿದ ಬಂಡ್ರಿ ಲಿಂಗಪ್ಪ ನವರ ಬಯಲಾಟದ ಮಾತುಗಳು ಎಲ್ಲರ ಗಮನ ಸೆಳೆದವು. ಲಿಂಗಪ್ಪಣ್ಣ ಹಾಗು ಅವರ ಮಗ ಶಿಕ್ಷಣಪ್ರೇಮಿ  ಯಂಕಪ್ಪನವರಿಗೆ ವಂದನೆಗಳು.

 ಸಹಕರಿಸಿದ ಎಲ್ಲರಿಗೂ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಮತ್ತು ಅಜಯ್ ಬಣಕಾರ್ ದಂಪತಿಗಳಿಗೂ  ವಂದನೆಗಳು ಸಲ್ಲಿಸುವೆ.


Leave a Reply

Back To Top