‘ಸರಳ ಸಜ್ಜನಿಕೆಯ ಮೂರುತಿ ಲಾಲಬಹಾದ್ದೂರ ಶಾಸ್ತ್ರಿ’ಡಾ.ದಾನಮ್ಮ ಝಳಕಿ ಅವರ ಕವಿತೆ

ಸರಳತೆಯ ಸಾಕಾರ ಮೂರುತಿಯ ನಾಯಕ
ಜೈ ಜವಾನ ಜೈ ಕಿಸಾನ ಘೋಷಣೆಯ ಜನಕ
ಶಾರದಾಪ್ರಸಾದ ರಾಮದುಲಾರಿ ದೇವಿ ಕನಕ
ಮೊಘಲಸರಾಯಿ ಹಳ್ಳಿಯ ಪದಕ

ಗಂಗಾ ನದಿ ಈಜಿ ಹೋದ ಧೀಮಂತ ಬಾಲಕ
ಕಾಶೀ ವಿದ್ಯಾಪೀಠದಲಿ ಶಾಸ್ತ್ರೀ ಪದವಿ ಪಡೆದ ನಾಯಕ
ಲಲಿತಾದೇವಿಯ ಕೈಹಿಡಿದ ವರದಾಯಕ
ಸ್ವಾತಂತ್ರ ಹೋರಾಟದ ಕೆಚ್ಚೆದೆಯ ಸೈನಿಕ

ರೈಲು ಮಂತ್ರಿಯಾಗಿ ದಿಟ್ಟ ಹೆಜ್ಜೆ ಇಟ್ಟ
ಮಕ್ಕಳಿಗಾಗಿ ಆಸ್ತಿಮಾಡದ ಮಾದರಿ ಕೊಟ್ಟ
ಭಾರತೀಯರ ಅಚ್ಚುಮೆಚ್ಚಿನ ಪ್ರಧಾನಿ ಪಟ್ಟ
ತಾಷ್ಕೆಂಟ ಐತಿಹಾಸಿಕ ಒಪ್ಪಂದಕ್ಕೆ ಸಹಿ ಇಟ್ಟ

ಹಸಿರು ಕ್ರಾಂತಿಯ ಪ್ರೇರಕ
ಸೋಮವಾರ (ಶಾಸ್ತ್ರೀ) ಉಪವಾಸದ ಜನಕ
ಪ್ರಾಮಾಣಿಕತೆಯ ರೂಪಕ
ಮನಮನದಲ್ಲಿ ಅಚ್ಚೊತ್ತಿದ ನಾಯಕ

ಭವ್ಯ ಭಾರತದ ಜನಮನ ಹೃದಯತಟ್ಟಿದ
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗುಡುಗಿದ
ಮೂರುತಿ ಚಿಕ್ಕದಾದರೂ ಕಿರುತಿ ದೊಡ್ಡದು
ಸರಳ ಸಜ್ಜನಿಕೆಯ ಲಾಲಬಹಾದ್ದೂರ ಶಾಸ್ತ್ರಿ ಅವರದು


One thought on “‘ಸರಳ ಸಜ್ಜನಿಕೆಯ ಮೂರುತಿ ಲಾಲಬಹಾದ್ದೂರ ಶಾಸ್ತ್ರಿ’ಡಾ.ದಾನಮ್ಮ ಝಳಕಿ ಅವರ ಕವಿತೆ

Leave a Reply

Back To Top