ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ
‘ಅವಳ ಹೆಜ್ಜೆ ಗುರುತು’
ಅವಳು ಇಟ್ಟ ಆ ಒಂದು ಪುಟ್ಟ ಹೆಜ್ಜೆ
ನನ್ನ ಮನದೊಳಗೆ ಪ್ರೇಮದ ಹಕ್ಕಿಯಾಗಿ
ನನ್ನ ಕಲ್ಪನೆಯ ಕನಸಿನ ಅರಮನೆಯಲ್ಲಿ
ಹೊಸ ಕಾವ್ಯ ಗೀತೆಯನ್ನು ಬರೆದಿದೆ..!!
ಆ ಗೀತೆಯಲ್ಲಿ ಬರೆದಿರುವ ಪ್ರತಿಯೊಂದು
ಸಾಲು ನನ್ನ ಮನದ ಒಂದೊಂದು ಮಾತುಗಳಾಗಿ
ಆ ಮಾತುಗಳೆ ನಾನು ಅವಳಿಗೆ ಕೊಟ್ಟಂತ
ಪ್ರೇಮಿಗಳ ದಿನದ ಕೆಂಗುಲಾಬಿಯಾಗಿ ಅರಳಿದೆ..!!
ಆ ಗುಲಾಬಿಯ ಒಳಗೆ ಸೆರೆಸಿಕ್ಕ ನನ್ನ ಮನವು
ಒದ್ದಾಡುತ್ತಿರಲು ಅವಳ ಆ ಮಾತುಗಳೆ ನನಗೆ
ನನ್ನ ಬದುಕಿನ ದಾರಿಯಲ್ಲಿ ನಿನಗೆ ಬೆಳಕಿನ
ದೀಪಾವಳಿಯಾಗಿ ನನಗೆ ಬದುಕಿನ ಗುರಿಯನ್ನು
ತಿಳಿಸಿದೆ..!!
ಆ ಗುರಿಯನ್ನು ತಲುಪಲು ಮೊದಲೇ ನಾನೊಂದು
ಅವಳ ಪ್ರೇಮದ ಪಂಜರದೊಳಗೆ ಬಂದಿಯಾದ
ಹಕ್ಕಿಯಾಗಿ ಅವಳದೆ ನೆನಪುಗಳ ಸರಮಾಲೆಯನ್ನ
ಮತ್ತೆ ಮತ್ತೆ ಹೆಣೆಯುತ್ತ ನನ್ನನ್ನು ಪರದಾಡುವಂತೆ
ಮಾಡಿದೆ..!!
ನಿಜಗುಣಿ ಎಸ್ ಕೆಂಗನಾಳ