ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-

ಮನದ ಭಾವನೆಗಳೆಲ್ಲ
ಮೈ ತುಂಬಿ ಹರಿದು
ಕನಸುಗಳ ಪಲ್ಲವಿಯಲ್ಲಿ ಗಾನ ಹಾಡಿತು

ಹಸಿರು ಸಿರಿಯ ಸಾಲುಗಳಲ್ಲಿ
ಮಳೆಯ ತುಂತುರು ನಿನಾದದಲ್ಲಿ
ಹನಿ ಹನಿ ಇಬ್ಬನಿ ತಾಗಿ
ಮತ್ತದೇ ಪ್ರೀತಿಯ ನೆನಹಿಕೆ

ಕಾದು ಕಾದು ಕನವರಿಸಿದ ಕಂಗಳಿಗೆ
ದೂರದಲ್ಲಿ ಎಲ್ಲೋ ಆಸೆಯ ಪಸೆ
ಕಾಣಬಹುದು ತೇಲಬಹುದು ಮುಗುಳ್ನಗೆಯೊಂದಿಗೆ ನಕ್ಕು ಹಗುರಾಗಬಹುದು

ಜೀವಕ್ಕೆ ತಾನೇ ಜೀವದ ಅರಿವು ಕನಸಿಗೆ ತಾನೇ ಬೆಳಕಿನ ಹರಿವು ನನ್ನ ಮತ್ತು ಅವನೊಳಗಿನ ಸೆಳವು ಕಂಡು ಕಾಣದಂತೆ ಕಾಯುತ್ತಿರುವುದು

ಬದುಕಿನ ನಿರಂತರ ಉತ್ಸವದಲ್ಲಿ ಸುಖ ದುಃಖಗಳ ಸಂಬಂಧದಲ್ಲಿ ಜೀವಾಳತೆಯ ಸೆಲೆಯೊಂದು ಕಾಯುತ್ತಲೇ ಇದೆ
ಕಣ್ಣಳತೆಯ ದೂರದವರೆಗೆ


2 thoughts on “ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-

  1. ಕವನ ಚೆನ್ನಾಗಿದೆ ಮತ್ತು ಅದ್ಭುತವಾಗಿದೆ. ನಿಮ್ಮ ಆಲೋಚನೆಗಳೊಂದಿಗೆ ಬರೆಯುವುದನ್ನು ಮುಂದುವರಿಸಿ.

Leave a Reply

Back To Top