ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’

ಇಂದು ಭಗತನ
ಹುಟ್ಟು ಹಬ್ಬ
ಹುತಾತ್ಮನಾಗಲೆಂದೇ
ಹುಟ್ಟಿ ಬಂದ
ಎಳೆಯತನದಲಿ
ಎದೆಯಲ್ಲಿ ಬಿದ್ದ
ಕ್ರಾಂತಿ ಬೀಜ ಬೆಳೆದು
ಹೆಮ್ಮರವಾಯಿತು
ದಂಗೆ ಎದ್ದನು ಸುಖದೇವ್
ರಾಜಗುರರೊಡನೆ
ಕೆಂಪು ಮೋತಿ
ಬ್ರಿಟಿಷರ ಅಟ್ಟಾಡಿಸಿ
ಹೊಡೆದನು ಕೊಂದನು
ಆಂಗ್ಲ ಅಧಿಕಾರಿ
ಸ್ವರಾಜ್ಯದ ಕನಸು
ಕಂಡ ಚಿಗುರು
ಮೀಸೆ ಯುವಕ
ಖೈದಿಯಾದನು
ದೇಶ ವಿಮುಕ್ತಿಗೊಳಿಸಲು.
ಎಳೆಯ ಗೋಣು ಕುಣಿಕಿಗೆ
ರಕ್ತ ಚೆಲ್ಲಿತು ನೆಲಕೆ
ಎಲ್ಲರ ಕಣ್ಣಲ್ಲಿ ಕಣ್ಣೀರು
ಭಗತನ ಮುಖದಲ್ಲಿ
ಮಂದಹಾಸದ ನಗೆ
ಹುಟ್ಟಿದ ಭಗತ
ಹುತಾತ್ಮನಾದ
ಭಗತ ಸಿಂಗ ಅಮರ ರಹೆ


3 thoughts on “ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’

  1. ಭಗತ ಸಿಂಗ್ ನ ರಾಷ್ಟ್ರ ಪ್ರೇಮ ಬಿಂಬಿಸುವ ಕವನ ಎಲ್ಲರಲ್ಲಿ ದೇಶಭಕ್ತಿಯನ್ನು ಹುಟ್ಟುಹಾಕುವುದರಲ್ಲಿ ಎರಡು ಮಾತಿಲ್ಲ
    ನಮ್ಮ ದೇಶದ ಸಲುವಾಗಿ ಹೋರಾಡಿದ ಮಹನೀಯರನ್ನು ನೆನೆಯುವ.. ಅವರಿಗೆ ಅಭಿಮಾನದ ನುಡಿನಮನವನ್ನು ಸಲ್ಲಿಸುವ ನಿಮ್ಮ ಕವನ ಮನಮುಟ್ಟುವಂತಿದೆ.. ಸರ್

    ಸುತೇಜ

  2. ದೇಶಭಕ್ತನ ನೆನಪು ಅಜರಾಮರ ಕವಿತೆ ಚೆನ್ನಾಗಿದೆ ಸರ್ ಧನ್ಯವಾದಗಳು

Leave a Reply

Back To Top