ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ ‘ನೆಲೆ’

ಅಳಿದು ಉಳಿದ ಹಕ್ಕಿಯೊಂದಕೆ
ಗೂಡು ಕಟ್ಟುವ ಆಸೆಯೊಂದಿದೆ
ರಕ್ಕೆಯನು ಗಟ್ಟಿಗೊಳಿಸಿ ಬಾನಲಿ
ಹಾರುವಂತೆ ಶುಶ್ರೂಷೆ ನೀಡುವುದಿದೆ

ಆನಂದದಿ ಅದರ ಹಾಡೊಂದಕೆ
ಮೈಮರೆತು ನನ್ನೆ ಮರೆಯಬೇಕಿದೆ
ಕತ್ತಲಲ್ಲಿಯೂ ಬೆಳಕಿನ ಕಿರಣಗಳು
ಪ್ರಜ್ವಲಿಸುಂತೆ ಕನಸು ಕಾಣಬೇಕಿದೆ

ಸ್ವಾತಂತ್ರ್ಯದ ನೆಲೆಯೊಂದನು ಹುಡುಕಿ
ತೋರುವುದಿದೆ ನೆಮ್ಮದಿಯ ಕಾಣುವಂತೆ
ಮಾತೊಂದನು ನುಡಿಯಬೇಕಿದೆ ಜೊತೆಗೆ
ಕಟ್ಟಿದ ಗುಡಿಯು ಗಟ್ಟಿಯಾಗುವಂತೆ


One thought on “ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ ‘ನೆಲೆ’

Leave a Reply

Back To Top