ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಾನೂ ಅಳುತ್ತೇನೆ

ಗೆಳೆಯರೇ
ನಾನೂ ಅಳುತ್ತೇನೆ
ಹೀಗೆ ಒಬ್ಬನೇ
ಮರದ ಮರೆಗೆ
ಗೋಡೆಯ ಹಿಂದೆ
ದಿಂಬಿಗೆ ತಲೆಯೊರಗಿ
ಮುಖ ಮುಚ್ಚಿಕೊಂಡು
ಒಬ್ಬನೇ ಅಳುವ ಪ್ರಯತ್ನ
ಎಂದೋ ತುಂಬಿಕೊಂಡಿದ್ದ
ದುಃಖದ ಮಡುವು
ನೋವು ಕಷ್ಟಗಳ ಕಸರು
ಕಿತ್ತೆಸೆಯಲು ಮತ್ತೆ ಮತ್ತೆ
ಅಳಬೇಕೆನ್ನುತ್ತೇನೆ
ಹೊರಗೆ ಹುಸಿ ನಗೆ
ಬಣ್ಣದ ಅಲಂಕಾರ
ಒಳಗೊಳಗೇ ನಿಲ್ಲದ ಬಿಕ್ಕುವಿಕೆ
ಯಾರೂ ಗುರುತಿಸಿದ ನನ್ನಳುವು
ನನ್ನವಳ ಸೂಕ್ಷ್ಮ ಮನಸ್ಸಿಗೆ ಗೋಚರ
ಬಂದು ಕೈಯೊತ್ತಿ ಹೇಳಿದಳು
ಇರುವೆ ನಲ್ಲ ನಿನ್ನ ಜೊತೆಗೆ
ಬಿಟ್ಟು ಬಿಡು ನೋವ ಎಂದಾಗ
ಕಣ್ಣೀರು ಕಡಲು ಕಟ್ಟೆಯೊಡೆದು
ನಾನೂ ಅಳುತ್ತೇನೆ ಆಗಾಗ

ಹೀಗೆ ಒಬ್ಬನೇ


15 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಾನೂ ಅಳುತ್ತೇನೆ

  1. ಸುಂದರ ಕವಿತೆ ಧನ್ಯವಾದಗಳು ಸರ್

    1. ಮಳೆ ಸುರಿಸಿ ಹಗುರಾದ ಮೋಡದಂತೆ
      ಅತ್ತೂ ಮನಸಿನ novella ಮರೆಯಬೇಕು.
      ಅಲ್ವಾ ಸರ್ I

  2. ಒಮ್ಮೊಮ್ಮೆ ಹೊರಹಾಕುವ ದುಃಖದ ಮಡುವು… ಅದನ್ನು ಸಾಂತ್ವನಗೊಳಿಸಲು ಕೈಹಿಡಿದ ಸಂಗಾತಿಯ ಭರವಸೆಯ ನುಡಿಗಳು
    … ಮನ ತಟ್ಟುವ ಕವನ

    ಸುತೇಜ

  3. ಅರ್ಥ ಪೂರ್ಣ ಅಭಿವ್ಯಕ್ತಿ ಉತ್ತಮ ಸಾಹಿತ್ಯ ಕೃಷಿ

  4. ಹೊರಗೆ ಹುಸಿನಗೆ ಬಣ್ಣದ ಅಲಂಕಾರ, ಒಳಗೊಳಗೆ ನಿಲ್ಲದ ಬಿಕ್ಕುವಿಕೆ… ಚೆಂದದ ಸಾಲುಗಳು … ವಾಸ್ತವತೆಯ ಬಿಂಬಿಸುವ ಸುಂದರ ಕವನ ಸರ್

  5. ಭಾವನೆಗಳನ್ನು ಹೊರಹಾಕುವ ಮಾರ್ಗ, ಎದೆ ತುಂಬಿ ಬಂದಾಗ ಕಣ್ಣೀರು ಕಡಲುಕ್ಕಿ ಹರಿದಾಗಲೇ ಮನಕೆ ನೆಮ್ಮದಿ. ಆದರೆ ಅದನ್ನರಿತು ಸಾಂತ್ವನಗೊಳಿಸುವ ಸಂಗಾತಿ, ಮೃದು ಹೃದಯವಿರಲು ಇನ್ನೂ ಅತ್ತು ಹಗುರಾಗ ಬೇಕೆನಿಸುತ್ತದೆ.

  6. ಕವಿತೆ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಕವನಕ್ಕೆ ನಿಮ್ಮ ಕವನವೇ ಸಾಟಿ.

  7. ಅಳಬೇಕು ಅತ್ತು ಹಗುರಾಗಬೇಕು.
    ಮನ ಪ್ರಕ್ಷುಬ್ದವಾದಾಗ ಅದೊಂದೇ ಸಂತೈಸಿಕೊಳ್ಳುಲು ಇರುವ ಆಸರೆ. ಸಂತಯಿಸುವ ಹೆಗಲು ಸಿಕ್ಕು ಆ ದುಗುಡವೆಲ್ಲ ಕಣ್ಣೀರಾಗಿ ಹರಿದು ಹೋದಾಗ ಅದೇನೋ ವಿಲಕ್ಷಣ ಶಾಂತಿ!

Leave a Reply

Back To Top