ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
‘ಗಿಳಿ ಹೇಳಿದ ಕತೆ’
ಇದ್ದವೆರಡು ಗಿಣಿಗಳು
ತಾಯಿ ಬೇರಿನ ನೆರಳಲಿ
ಬೆಳೆದೆವರಡು ಜೋಡಿಯಾಗಿ
ಆತ್ಮೀಯ ಗೆಳತಿಯರಂದದಿ
ರೆಕ್ಕೆ ಬಿಚ್ಚಿ ಹಾರುತ್ತಿದ್ದವು
ಮನ ಬಿಚ್ಚಿ ಹಾಡುತ್ತಿದ್ದವು
ನಕ್ಕು ನಲಿಯುತ್ತಿದ್ದವು
ಆನಂದದಿ ಕಾಲ ಕಳೆಯುತ್ತಿದ್ದವು
ಬೆಳೆದು ನಿಂತು ಗಿಣಿಗಳೆರಡು
ಮದುವೆಯಾದವು ಅಬ್ಬರದಿ
ಖುಷಿಯ ಕಾಣುವ ಸಂಭ್ರಮ
ನೆಲೆಸಿದವು ಬೇರೆ ಬೇರೆ ಗೂಡಲಿ
ದೊಡ್ಡ ಗಿಳಿ ದೂರವಿರಲು
ಚಿಕ್ಕ ಗಿಳಿ ಗರ್ಭ ಧರಿಸಿ
ಜೀವ ಕೊಡುವ ಸಂಭ್ರಮ
ಮನೆಯವರಿಗೆಲ್ಲ ಸಂತಸ ಸಡಗರ
ಇದ್ದಕ್ಕಿದ್ದ ಹಾಗೆ ಬಂತು ಸಿಡಿಲಿನ
ಸುದ್ದಿ ಸಣ್ಣ ಗಿಳಿ ಬೆಂಕಿಗಾಹುತಿ
ನಾಲ್ಕು ದಿನ ಬೆಂದ ಗಿಳಿ
ಕತೆಯ ಹೇಳಿ ಪ್ರಾಣ ಬಿಟ್ಟಿತು
ಇತ್ತ ತಂದೆ ತಾಯಿ ದುಃಖ
ಆಕ್ರಂದನ ಆಕಾಶಕೆ ಮೊಳಗಿತು
ದೊಡ್ಡ ಗಿಳಿಯು ಅವಳ ನೆನೆಸಿ
ಕತೆಯ ರೂಪದಿ ಕವನ ಬರೆಯಿತು.
ಲಲಿತಾ ಪ್ರಭು ಅಂಗಡಿ