‘ದಂತ ಕಥೆ’ ಹಾಸ್ಯ ಲೇಖನ- ಗೀತಾ ಅಂಚಿ

ಆ ದಿನ ಗೋಧೋಳಿಯ ಹೊತ್ತಾಗಿತ್ತು. ನೆತ್ತಿಮ್ಯಾಲಿನ ಸೂರ್ಯನು ಮೆತ್ತಗೆ ಜಾರಿಕೊಂಡು ಚಂದ್ರನನ್ನು ಕಳಿಸೋ ಸಮಯ ಆಗಿತ್ತು.
ಇನ್ನೂ ರಾತ್ರಿನೇ ಆಗಿಲ್ಲ, ಮ್ಯಾಲ್ ನೋಡು ಚಂದಮಾಮ ಬಂದ್ ಬಿಟ್ಟಾನ ಅಂತ ನನ್ನ ದಾರಿ ಕಾದು ಕುಂತ ಸೂರಿಗೆ ಹೇಳಿದೆ.
ಹೌದಾ ನೋಡು ಹುಣ್ಣಿವಿ
ಬರಕತ್ತೈತ್ತಲ್ಲ ಅದಕ್ಕಾ ಲಗೂನ ಬಂದು ತನ್ನ ಅರ್ಧಮೊಖ ತೋರುಸ್ತಾನ, ನಿನ್ನಂತಾಗಲ್ಲ ಬಿಡು ಅಂತ
 ಸೂರಿ ಹೇಳಿದ.
ಆ ಮಾತ ಕೇಳಿ ನಂಗ ನಗು ಬಂತು,ನನ್ನ ನೋಡಿ ಆತನೂ ನಗಾಕ ಹತ್ತಿದ.ಆದ್ಯ ಒಂದು
ವಿಚಿತ್ರ ಅನ್ಸಕತ್ತಿತ್ತು.ತನ್ನ ಕರವಸ್ತ್ರ ತಗೊಂಡ್ ಬಾಯ್ ಮುಚ್ಕೊಂಡು ನಗ್ತಾ ಇದ್ದ. ನಾನು ಅದನ್ನ ಅವಸರ ಮಾಡಿ
ಕಸಿದು ಇಟ್ಕೊಂಡೆ. ಯಾಕ ಸೂರೀ ಬಾಯೀ ಮುಚ್ಕೊಂಡು ನಗಾಕತ್ತೀ? ಅಂದೆ.
ಏನ್ ಅಂತ ಹೇಳ್ಳೀ ನಿಂಗ… ಅದೊಂದು ದಂತ ಕಥೆನಾ ಆಗೇತಿ ಬಿಡು ಅಂದ.
ಹೌದಾ.. ಅದೆಂಥಾ ದಂತಕಥೆ ಅಂತ ಕುತೂಹಲದಿಂದ ಕೇಳ್ದೆ.
  ನೋಡು ಚಿನ್ನಮ್ಮಾ… ನಮ್ಮವ್ವ ಸಣ್ಣಾಕಿದ್ದಾಗ ಹುಂಚಿಪಕ್ಕಾ(ಹುಣಸೆ ಬೀಜ)
ತಿಂದು ತಿಂದು ಹುಳ ಬಿದ್ದಮ್ಯಾಲ ಹಲ್ಲ್ ಕಿತ್ತಿಸಿದ್ರಂತೆ,
ನಮ್ಮಪ್ಪನಾ ತಗೋ ಆತ ಬಂಡಿ(ಚಕ್ಕಡಿ) ಹೋಡಿವಾಗ ಆಡ ಹುಡುಗ್ರು ಮಂಗ್ಯಾ  ಸಂಬಂಧ ಓಡಸ್ಸಾಕಂತ ಪಟಾಕಿ ಹಚ್ಚಿದ್ವಂತ ಆ ಸೌಂಡ್ ಗೆ ಎತ್ತು ಎಳೆದು ನಮ್ಮಪ್ಪ ನ ಮುದ್ಲಾಪುರ ಕಾಲುವೆ ದಂಡಿಗೆ ಹೋಗುದ್ವಂತ ಅತನವು ಅದರ ಸಂಬಂಧ ನಾಕು ಹಲ್ಲು ಮುರುದ್ವಂತ. ಅಯ್ಯೋ ದೇವರಾ ಅದಕ್ಕ ಈಗ ಎಲಿ ಅಡಕಿ ಕುಟ್ಟೀ ಕೊಡ್ತೀರೀ? ಹುಂ ಮತ್ತೆ…
ಹೌದು ಬಿಡು ಅದಕ್ಕಾ ಇರಬೇಕ ನಿಮ್ಮಪ್ಪ ನನ್ನ ನೋಡಿ ನಗ್ತೀರ್ತಾನಲ್ಲ ಎಷ್ಟು ಚಂದ ಕಾಣ್ತಿರ್ತಾನ.ಹುಂ ಊರು ಅಗಸೀಬಾಗಿಲತರ ಅಂದ. ಆ ಮಾತಿಗೆ  ನಂಗ ನಗು ತಡ್ಕೊಳ್ಳಾಕ ಆಗ್ಲಿಲ್ಲ. ಆದರೂ ಸುಮ್ನಿದ್ದೆ.
ಅಲ್ಲಾ ಸೂರೀ.. ನಿಮ್ಮಣ್ಣ,ಅತ್ತಿಗ್ಯಾರು, ಅಕ್ಕನಾರಿಗೇನು ಆಗಿಲ್ಲೇನು?.
ಆಗ ಸರೀ ಅಂದ, ನಮ್ಮಣ್ಣಂದೇನುಆಗ ಸೂರೀ ಅಂದ ಅಯ್ಯೋ ನಮ್ಮಣ್ಣಂದೇನು ಕೇಳತೀ,
ನಾವು ಸಣ್ಣೋರಿದ್ದಾಗ ನಾಲ್ಕಾಣೆ ಎಂಟಾಣೆಗೆ ತಾಸು,ಅರ್ಧತಾಸು ಬಾಡಿಗೆ ಸೈಕಲ್ ಹೋಡಿಯಾಕ ಕೊಡ್ತಿದ್ರು ಗೊತ್ತೇನ್ ನಿಂಗ? ಹುಂ ಅಂದೆ.ಹಾಂ ಅದಾ ಸೈಕಲ್ ಹೋಡೀಯಾಕ್ ಹೋಗಿ  ಬಿದ್ದು ಹಲ್ಲ್ ಮುರ್ಕೊಂಡಾ, ಆ ಹಲ್ಲಿಗೆ ಈಗ ಬೆಳ್ಳಿ ಹಾಕಿಸಿಕೊಂಡು ನಕ್ಕೊಂತ ಅಡ್ಡ್ಯಾಡತ್ತಾನ ಗೊತ್ತೇನು ?
ಎಪ್ಪಾ ಮಾರಾಯಾ… ನಿಮ್ಮನೀ ದಂತಕಥೆ ಕೇಳಾಕ ನಂಗ ನಿಲ್ಲಾಗ ಆಗ್ವಲ್ದು, ಕೂಡಾಕೂ ಆಗವಲ್ದು.
   ಯಾಕ ಅಂಥದ್ದೇನಾಯ್ತು ?ಅಂದದ ಸೂರೀ…
ಏನಾಲ್ಲಪ್ಪ ಅಂದೆ. ಅಕ್ಕಾಗೂ ನಾನ್ ವೆಜ್ ಅಂದ್ರ ಭಾಳ ಜೀವ ಆಕೀ,ಆಕೀಗೂ ಎರಡು  ದವಡೀ ಹಲ್ಲು ಹುಳ ತಿಂದು ಹಲ್ಲುಬ್ಯಾನಿ ಅಂತಿರ್ತಾಳ.
ಇವತ್ತಾರ, ನಾಳಿಗಾದ್ರೂ ಹಲ್ಲು ಕಿತ್ತಿಸಿಕೊಂಡು ಬರಬೋದು ಅಂತ.
ನಾನು ನಗು ಮತ್ತ ಗಾಭರೀಯಿಂದ ಹೌದೇನಾ ಸೂರೀ ಅಂದೆ? ಹೌದಮ್ಮಾ ಅಂದ.
ಅಲ್ಲೊಂದು ಇಲ್ಲೊಂದು ಚಚುಕ್ಕೀ ಮೂಡಾಕ ಹತ್ತಿದ್ವು, ಯಾಕ ಎದ್ದು ನಿಂತಿ ಚಿನ್ನಮ್ಮ ಅಂದ.
ನಿಂಗ ಮನೀಗೆ ಹೋಗಾಕ ಹೊತ್ತಾತೇನು ಅಂದ, ಇಲ್ಲ ಬಿಡು ಹಂಗೇನಿಲ್ಲ,ಜೋರಾಗೀ ಕೂಗಿದ್ರಾ ನಮ್ಮನಿಗೆ ಕೇಳ ತೈತೀ.ನಾನೇನು ಬ್ಯಾರೇಕಡೇ ಬಂದೀನೇನು ಅಂದೆ..
  ಹೌದು ನಿಮ್ಮನೆಯವರೆಲ್ಲರಾ ಹಲ್ಲು
ಈ ತರ  ಆಗ್ಯಾವ, ನಿಮ್ಮನಿಗೆ ಬಂದ ಸೊಸೆಯಂದ್ರವು? ಅಂದೆ.
ಅಯ್ಯ ನಮ್ಮ ದೊಡ್ಡ ಅಣ್ಣನ ಹೆಂಣ್ತಿವು ಐದು ಹಲ್ಲು ಹಾಳಾದದ್ದಕ್ಕ ಕಿತ್ತಿಸಿ ಸಿಮೆಂಟ್ ತುಂಬಿಸೇವಿ ಅಂದ.
       ಎಪ್ಪಾ ಮಾರಾಯಾ… ಎಲ್ಲಾರವು ಆದವು, ನಿನ್ನ ಕಥೆ ಏನಂದೆ? ಅಯ್ಯೋ ಚಿನ್ನಮ್ಮ… ನನ್ನವು ಮೊದಲಾ ಕಿಂಡಿ, ಕಿಂಡೀ ಹಲ್ಲು, ಅದರಾಗ ಕೆಳಗಿನ ಹಲ್ಲೊಂದು ಮಾವಿನಕಾಯಿ ಕಡಿಯಾಕ ಹೋಗಿ ಮುರ್ಕೊಂಡ್ ಜೀರಿಗೆಯಾಟು ಉಳುದುತ್ತು, ಅದು ಅಲಗ್ಯಾಡ ಕತ್ತಿದ್ರಿಂದ ಊಟ ಇರಲಿಲ್ಲ, ನಿದ್ದಿ, ನೀರಡಿಕೀ ಏನೂ ಇರ್ಲಿಲ್ಲ.ಹಲ್ಲಿನ ಡಾಕ್ಟರ್ ಕಡೆ ಹೋಗಿ ಹೇಳದ ತಡಾನಾ ಕಿತ್ತಾಬಿಟ್ರು.
ಇಷ್ಟುಹೊತ್ತು ತಡದಿದ್ದ ನಗು,ಹೊಟ್ಟೀ ಹಿಡ್ಕೊಂಡ್ ನೆಲಕ್ಕಬಿದ್ದು ,ಉಸಿರಾಡದಂಗ ನಗಲು ಚಾಲೂಮಾಡ್ದೆ.
  ಹೇ ಯಾಕ, ಏನಾಯ್ತು ಅಂತ ಎಬ್ಬಿಸಲು ಬಂದ ಸೂರೀ, ಏನಿಲ್ಲಾ ತಡ್ಕೋ ಎಂದು ಮೆಲ್ಲಕ ಎದ್ದುನಿಂತೆ.
   ಇಷ್ಟೊತನ ನಗ್ತಿದ್ದೆ, ಆದ್ರ ಈಗ ಒಂದು ಚಿಂತೆ  ಶುರು ಆತು.
 ಅಲ್ಲಾ ಸೂರೀ. ..ಎಲ್ಲಾ ಸರೀ
ನಿಮಗ ದಂತಕಥೆ, ಆದರ ನಿನ್ನ ಮದುವೀ ಆಗ ಈ ಬರೋ ಹುಡುಗಿಯ ಉಡುಗೊರೀ ಏನು?..
ದಾಳಿಂಬರ ದಂತ ದಂತಗಳಾ ನಿಮಗ ಉಡುಗೊರೀ..ಅಂದೆ.
ಇದ್ದಕ್ಕ ಉತ್ರಿಲ್ಲ ಎಂದು ನಗ್ತಾ ಎದ್ದುನಿಂತ.  ಮನೆಕಡೆ ಹೊಗ್ತಾ ಸೂರೀಗೇಳಿದೆ..ನೋಡು ನಿನ್ನ ಮದುವಿಯಾಗಿ ಎದುರಿಸಕಾ ಸಿದ್ಧ ಇರಬೇಕು ಅಳದರೇನು? ಉಳದರೇನು ಎಂಬ ಚಿಂತಿಸದ ಸಂತಸದಲ್ಲಿ,ಹೆಂಗಿದ್ರೂ ಬಾಳ್ತೇನೆಂಬ ದೃಢ ನಿಲುವಿನಲ್ಲಿ.

————————–

Leave a Reply

Back To Top