ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ರಜೆ ಸಜೆ
ಭಾನುವಾರದ ರಜೆ
ಹೇಗೆ ಕಳೆಯಿತು ಕಾಣೆ
ಸ್ವಚ್ಚವಾಯಿತು ಮನೆಯ ಕೋಣೆ ಕೋಣೆ
ಮಲಗುವ ಮನೆಯಿಂದ
ಅಂಗಳದ ಕಡೆವರೆಗೂ
ಕೆಲಸ ಹೇಳಿದಳವಳು ನಗುಮೊಗದ ಅನ್ನಪೂರ್ಣೆ
ಅಳುವ ಗುರು ಗೌರಿನೆಳೆದು
ಹಿಡಿದು ಅಟ್ಟಿದಳು ಹೊರಗೆ
ಸಣ್ಣ ಪುಟ್ಟ ಪಾತ್ರೆ ಪಗಡೆಯ ನನಗೆ ತೊಳೆಯಲಿಟ್ಟು
ಗ್ಯಾಸಿನ ಒಲೆಯಿಂದಿಡಿದು
ಲೈಟರ್ ಕಟರ್ ಪ್ರಿಜ್ ಕವರ್
ನೀರು ಮುಟ್ಟಿಸದೆ ಸ್ವಚ್ಛವಾಗಿ ಜಾಡಿಸಿಟ್ಟಳವಳಷ್ಟೆ
ದಿನ ಕುಡಿವ ನೀರಿನ ಟಾಕಿ
ತುಂಬಿ ತನ್ನಿರೆಂದಳು ಈಕೆ
ತೊಟ್ಟಿಯ ನೀರೆಲ್ಲ ಹೊರ ಹಾಕಿ ತೊಳೆಯಿರೆಂದು
ಏನಿದು ಇಷ್ಟು ಜೊಂಡು
ಉಸಿರಿದೆನು ಒಳಗೆ ಕಂಡು
ಹೇಳಿ ಹೋಗಬೇಕೆಂದೆನವಳಿಗೆ ವ್ಯಾಳೇ ಕಂಡು
ಮೂಲೆ ಮೂಲೆಗೂ ಜೀಡ
ಹೊಡೆವ ಕರ್ಮವೂ ಬೇಡ
ನೋಡ ನೋಡುತಲೆ ಗಡಿಯಾರ ಪಳ್ ಪಳ್ಳೆಂದಿತು
ತವರುಮನೆ ಕೊಡುಗೆ
ಒಡೆದುಬಿಟ್ಟಿರಾ ಕಡೆಗೆ
ಮೂಲೆಯಿಂದ ನೀರು ತುಂಬಿದ ಗ್ಲಾಸು ಮೇಲೆರಗಿತು
ಕುಕ್ಕರ್ನಿಂದ ಹಾರಿತು ಸಿಳ್ಳು
ಸಂಡೇ ರಜೆ ಬರೀ ಸುಳ್ಳು
ಕಣ್ಣು ಹಾಸಿದೆ ಆ ಕಡೆ ಈ ಕಡೆ ಅವಳಿಲ್ಲ ಬರಿ ಕವನೆಳ್ಳು
ಮೊನ್ನೆ ದಾಟಿದೆ ಚಾಲಿಸು
ಅವಳು ನನ್ನಷ್ಟೇ ಕ್ರಾಸು
ಹೇಳಿ ಹೊರಟು ಬಿಟ್ಟೆ ತ್ರಾಸು ರಿಪೇರಿ ನಂದೀಗ ಚಾಳಿಸು
ಹನಮಂತ ಸೋಮನಕಟ್ಟಿ