ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಅಂತರಂಗ ಬಹಿರಂಗ
ಒಂದು ಬಿಡುಗಡೆ ಬೇಕು
ನಿತ್ಯದ ಗಡಿಬಿಡಿಯ ಬಾಳಿನಲಿ
ಯಾರಿಗೂ ಪುರಸೋತ್ತು ಇಲ್ಲ
ಇಂದಿನ ಜೀವನದ ಗೋಳಲಿ
ಯಾರಿಗೆ ಯಾರೂ ಇಲ್ಲ
ಅರ್ಥವಿಲ್ಲದ ಜಗದಲಿ
ಕಾಂಚಾಣಂ ಕಾರ್ಯ ಸಿದ್ದಿ
ಪ್ರತಿ ನಿತ್ಯದ ಕಾರ್ಯದಲಿ
ಈಗೀಗ ನಗುವು ಮೂಡುತ್ತಿಲ್ಲ
ಯಾರೆಂದರೆ ಯಾರ ಮೊಗದಲಿ
ಇನ್ನೊಬ್ಬರನ್ನು ನೋಡಿ ಬೇಯುತ್ತಿದ್ದಾರೆ
ಹೊಟ್ಟೆಯ ಕಿಚ್ಚಿನಲಿ
ಅವರವರ ಸಂಕಟ ಅವರವರಿಗೆ
ಮಾಡಿದ ಪಾಪ ಸುತ್ತಿಕೊಳ್ಳುವುದು
ಉರುಳಾಗಿ ಅವರದೇ ಕೊರಳಿಗೆ
ಯಾವ ಔಷಧಿಯೂ ಇಲ್ಲ
ವೈದ್ಯ ಲೋಕದಲಿ ಹೊಟ್ಟೆಕಿಚ್ಚಿಗೆ
ಒಳಗೊಳಗೆ ಸುಟ್ಟಿ ಹೋಗುವರು
ಹೊಟ್ಟೆ ಉರಿಗೆ ದ್ವೇಷದ ಕಿಡಿಗೆ
ಬೇಕಿಲ್ಲ ನಮ್ಮ ಎಲ್ಲಾ ಕಾಯಕಕ್ಕೆ
ಜಗದ ಜನರಾ ಮೆಚ್ಚುಗೆ
ಇರಲಿ ಒಳ್ಳೆಯ ಕಾರ್ಯಕ್ಕೆ
ಅಂತರಂಗದ ಒಪ್ಪಿಗೆ
ಯಾರು ಮೆಚ್ಚಿದರೇನು
ಯಾರು ಪ್ರಶಂಶಿಸಿದರೇನು
ನಮ್ಮ ತಪ್ಪು ಒಪ್ಪಿನ ಅರಿವು
ನಮ್ಮೊಳಗೆ ಇರದೇನು
ಆತ್ಮ ವಿಮರ್ಶೆಯು ಕೊಡುವ
ಮನದ ಕನ್ನಡಿ ಎದುರು
ಉಳಿದೆಲ್ಲವೂ ಶೂನ್ಯ ಶೂನ್ಯ
ಅಂತರಂಗದ ನೆಮ್ಮದಿಯಷ್ಟೇ
ಈ ಜೀವ ಜೀವಕ್ಕೆ ಮಾನ್ಯ ಮಾನ್ಯ
ಅಂತರಂಗ ಬಹಿರಂಗ ಪರಿಶುದ್ಧವಾಗಿರಲು ಮನಸ್ಸಿಗೆ ನೆಮ್ಮದಿಯ ಪ್ರಾಪ್ತಿಯು
ನಾಗರಾಜ ಜಿ. ಎನ್. ಬಾಡ