ಅನುರಾಧಾ ರಾಜೀವ್ ಅವರ ಕವಿತೆ-ಕುಸುಮ ಕೋಮಲೆ

ರವಿಯ ಕಾಣುತ ಬಿರಿದು ನಿಂತಳು
ಕುಸುಮ ಕೋಮಲೆ ನಲಿಯುತ
ಕವಿಯ ಭಾವವು ಮುದದಿ ನೋಡಿದೆ
ನೆನೆಸಿ ಮನದಲಿ ಪುಳಕಿತ

ಇಳೆಯ ಚೆಲುವಿನ ಪರಿಯ ನೋಡಿರಿ
ಸರಿಸಮ ಇಲ್ಲವು ಲೋಕದಿ
ಹೊಳೆವ ತಾವರೆಯು ಬಳುಕಿ ನಿಂತಳು
ನಲ್ಲನ ಸೇರುವ ತವಕದಿ

ನೀರ ತುಂಬಾ ಎಲೆಯು ಹರಡಿದೆ
ನಡುವೆ ಸುಂದರ ಮೊಗ್ಗಿದೆ
ಶಿರದ ಮೇಲಣ ಗಿರಿಯು ನಲಿದಿದೆ
ಬಾನು ರಂಗನು ಚಿಮ್ಮಿದೆ

ಪ್ರೇಮ ಸುಮವು ಬಳಿಗೆ ಕರೆದಿದೆ
ಎದೆಯ ಬಯಕೆಯ ಅರುಹಲು
ಸಾಮ ಗಾನದಿ ಕೂಡಿ ನಲಿಯುವ
ಪಡೆದು ಸಾರ್ಥಕತೆ ಒಲವಲಿ


Leave a Reply

Back To Top