ಕಾವ್ಯ ಸಂಗಾತಿ
ರಾಹುಲ್ ಸರೋದೆ
ಮುಗ್ದ ಮನಸ್ಸು
ಮುಗ್ದ ಮನಸ್ಸಿನ ಪುಟ್ಟ ಕಂದವೋಂದು ಗ್ರಾಮ ದೇವಿಯ ಗುಡಿಯ ಜಗಲಿಯಲಿ ಶಾಲೆಯ ಪಠ್ಯವ ಓದುತಲಿತ್ತು,ಬರೆಯುತಲಿತ್ತು.
ನಿಶ್ಕಲ್ಮಶ ಮನಸ್ಸಿನ ಮೌನ
ಭಾವದಿ ಓದುತ, ಬರೆಯುತ,
ಮೊಗದ ಮಂದಹಾಸದಿ ಕಣ್ಣು ಪಿಳಿಪಿಳಿ ಪಿಳುಕಿಸುತ್ತಿತ್ತು
ಅಮ್ಮನ ಆಸೆಗೆ ಅಪ್ಪನ ಕನಸಿಗೆ
ಬಣ್ಣವ ತಿಡುತ ಅಕ್ಷರಭ್ಯಾಸವ ಕಲಿಯುತಲಿತ್ತು. ಅಕ್ಷರ ಕಲಿಸಿದ ಗುರುವಿಗೆ ಗರ್ವದಿ ವಂದನೆ ತಿಳಿಸುತಲಿತ್ತು.
ಮಗ್ದ ಮನಸ್ಸಿನ ಪುಟ್ಟ ಗೂಡಲಿ
ಡಾಕ್ಟರ್, ಇಂಜಿನಿಯರ್,ಪೋಲಿಸ್,ಪೈಲೆಟ್ ಆಗುವ ಕನಸಿನ ಮೂಟೆಯ ಹೊತ್ತು ಸಾಗಿತ್ತು.
——————————————-
ರಾಹುಲ್ ಸರೋದೆ
ಧನ್ಯವಾದಗಳು ಸಂಗಾತಿ ಪತ್ರಿಕಾ ಸಂಪಾದಕರಿಗೆ