ಮಧುಮಾಲತಿರುದ್ರೇಶ್ ಕವಿತೆ-ಒಲವಿನಾಮೃತ

ಸಗ್ಗವೀ ಬಾಳು ಸಂಗಾತಿ ನಿನ್ನಿಂದ
ಸಾಕೆನಗೆ ನಿನ್ನೊಲುಮೆಯ ಒರತೆ
ಸಿಹಿ ಸವಿ ಪಯಣ ನಿನ್ನೊಡನೆ
ಸೀಮೆಯಾಚೆಗೂ ಸಿಗದವನು ನೀನು
ಸುಮವರಳಿದ ಬನವಾಗಿದೆ ಸಂಸಾರ
ಸೂರ್ಯ ಚಂದ್ರರಂತೆ ಅಮರ ನಮ್ಮ ಪ್ರೇಮ
ಸೃಷ್ಟಿಯ ಅದ್ಭುತ ಪ್ರೇಮಮಯಿ ನೀ
ಸೆರಗಂಚಲಿ ಕಾಪಿಡುವೆ ನಿನ್ನೊಲವ
ಸೇರಿದೆವು ದೈವ ಕೃಪೆಯಿಂದ
ಸೈರಣೆಯೇ ನಮ್ಮ ದಾಂಪತ್ಯದ ಗೆಲುವು
ಸೊಗವಿದು ಬಾಳ ಪಯಣವು
ಸೋಲೆಲ್ಲಿಹುದು ನಿನ್ನೊಡನಿರಲು
ಸೌಗಂಧ ಬೀರಿದೆ ಒಲವ ಸುಮ
ಸಂಸಾರ ಕಡಲಲಿ ತೇಲಿಹೆವು ನಿತ್ಯ
ಸಹಬಾಳ್ವೆಗಿದೆ ನಿನ್ನೊಲವ ಅಮೃತ
ಬದುಕಿದು ಸುಂದರ ಯಾನ


One thought on “ಮಧುಮಾಲತಿರುದ್ರೇಶ್ ಕವಿತೆ-ಒಲವಿನಾಮೃತ

Leave a Reply

Back To Top