ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀನು ಹೇಳಬೇಕಿರುವ ಮಾತು ಒಮ್ಮೆ ಹೇಳಿ ಬಿಡು ಗೆಳತಿ
ನಿನ್ನ ಭಾವನೆಯ ಮಾತು ನನ್ನದೆಗೆ ಮುಟ್ಟಿಸಿ ಬಿಡುಗೆಳತಿ

ನೀನು ಕೊರಗಿ ದುರಾದರೆ ನನ್ನುಸಿರು ಕ್ಷಣ ನಿಲ್ಲದು ಗೆಳತಿ
ನಿನ್ನ ಮಾತುಗಳಿಗೆ ಯಾವ ಬೆಲೆಯು ಕಟ್ಟಲಾಗದು ಗೆಳತಿ

ಹೃದಯಗಳೆರಡು ಹೊಸೆದ ಪ್ರೇಮ ಬಂಧವಿದು ಗೆಳತಿ
ಅಮರ ಪ್ರೇಮಕೆ ನಮ್ಮ ಪ್ರೀತಿಯೇ ಸಾಕ್ಷಿಯಾಗಲಿ ಗೆಳತಿ

ಭೂಮಿ ಚಂದ್ರನ ಸಂಬಂಧ ನರರರಿಗೇನು ಗೊತ್ತು ಗೆಳತಿ
ಕಾಮದ ಮಧವೇರಿದವರಿಗೆ ಪ್ರೀತಿ ಬೆಲೆ ಏನು ಗೊತ್ತು ಗೆಳತಿ

ಕಣ್ಣೊಳಗೆ ಹುಟ್ಟಿದ ಪ್ರೀತಿ ಅಮರವಾಗಲಿ ಬಿಡು ಗೆಳತಿ
ಕಾಮಕ್ಕೋಷ್ಕರ ಹುಟ್ಟಿದ ಪ್ರೀತಿ ಅಂತ್ಯವಾಗಲಿ ಬಿಡು ಗೆಳತಿ


About The Author

Leave a Reply

You cannot copy content of this page