ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ಅದೋ ಮತ್ತೆ ಅವಳೇ….

ಅದೊಂದು ದಿನ
ಮುಂಜಾವು ಕಳೆದ
ಮುಂದಿನಜಾವ
ವೃತ್ತ ಸುತ್ತಿದ ಜನಸಂದಣಿ
ಗುರ್ ಗರ್ ಎನ್ನುವ
ವಾಹನಗಳ ಮಧ್ಯೆ
ಮರೆಯಾಗಿದ್ದ ಮುದ್ದಾದ
ಅರಗಿಣಿ…
ನೋಡಿದಂತೆ ಕಾಣುವ
ತರಂಗಿಣಿ…..

ಕೇಳಿಸದ ಕಾಲ್ಗೆಜ್ಜೆಯ ಸಪ್ಪಳ
ಕುಣಿಯುವ ಗೆಜ್ಜೆಗಳೇ ಫಳಫಳ
ಹೆಜ್ಜೆಗಳ ನವನೃತ್ಯನರ್ತನ
ನಾಟ್ಯ ಮಯೂರಿಯ ಆಮಂತ್ರಣ .
ನೋಡಿಯೂ ನೋಡದಂತಹ
ಬಿಂಕದ ನಡೆಗೆ
ಕಂಡರೂ ಕಾಣದಂತಹ
ಅಂಕದ ತುದಿಗೆ

ಪ್ರತಿಹೆಜ್ಜೆಯಲ್ಲೂ ಆಡಂಬರಿ
ಹುಡುಕಿದರೂ ಸಿಗದ ನೀಲಾಂಬರಿ
ಅವಳದೊ ನಕ್ಕರೆ ನಸುನಗೆ,,
ಮನಹೊಕ್ಕರೆ ಮುಗುಳ್ನಗೆ
ಹೃದಯಕ್ಕಿಳಿದರೆ ಕಾಣದ
ಸವಿಹಿತರಸಗಂಗೆಯ ಹೂನಗೆ.

ಅವಳ…..
ಕಂಠಸಿರಿ ಜೇನಧ್ವನಿ
ಕೋಲ್ಮಿಂಚಿನ ಕಂಗಳಿಗೆ
ರಾಚುವ ಇಬ್ಬನಿ
ಭಾವಸನ್ನೆಯ ಸ್ನೇಹಪ್ರೇಮದ ಕಂಪನಿ
ಪ್ರೇಮನಿಲುಗಡೆಯ ಭಾಮಿನಿ.
ಕಾಣದೇ ಹೋದಳು ಯಾಮಿನಿ
ಆ ಕ್ಷಣವೇ ಮಾಡಿದೆ
ಪ್ರೇಮಾಂಕುರದ ನಾಮಿನಿ…


19 thoughts on “ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ಅದೋ ಮತ್ತೆ ಅವಳೇ….

    1. ಗುರುಗಳೇ ನಿಮ್ಮ ಕಾವ್ಯವನ್ನು ಮತ್ತೆ ಮತ್ತೆ ಓದ ಬೇಕು ಅನಿಸುತ್ತೆ ಗುರುಗಳೇ

  1. ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ ಸರ್. ನಿಮ್ಮ ಕವಿತೆ ಓದಲು ನಾವು ಕಾಯುತ್ತಾ ಇರುತ್ತೇವೆ… ಹೀಗೆ ಕವಿತೆಗಳನ್ನು ಬರೆಯಿರಿ ಸರ್…

  2. Super sir….. ಕಾಲ್ಗೆಜ್ಜೆಗಳ ಶಬ್ದದಂತೆ ನಿಮ್ಮ ಪ್ರತಿಯೊಂದು ಶಬ್ದವು ನಮ್ಮ ಮನ ಮುಟ್ಟಿದೆ.

Leave a Reply

Back To Top