ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
‘ಹೊದಿಕೆ’
ಬುವಿಯ ಒಡಲಲ್ಲಿ
ಜೀವದ ಪ್ರೀತಿ
ಅಭಿಮಾನ ಹುಟ್ಟಿ
ಆಪ್ತವಾದ ಮಾತ ರೀತಿ
ಓದಿನ ಸುತ್ತ
ಹೆಣೆದುಕೊಂಡ ಹೊದಿಕೆ
ಮನದಿ ಮೂಡಿದ
ಭಾವಗಳಲ್ಲಿ ಗುರುತಿರದ ಉಳಿಕೆ
ಸಾಲುಗಳ ಸೂಕ್ಷ್ಮತೆ
ಬಿಡಿಸಿದರೂ ಬಿಡಿಸದಾ
ಬಂಧದಲ್ಲಿ ಸುತ್ತಿಕೊಂಡ
ಮಣ್ಣಿನ ಋಣದ ನಗು
ತೇಲಿ ಹೋಗುವ
ಮೋಡದ ತುಂಬಾ ಅದರದೇ
ನಿಲುವಿನ ಒಲುಮೆ
ಹೊದಿಕೆ ಎಂಬ ಭಾವ
ಮನಸ್ಸಿಗೆ ಅಂಟಿದರೆ
ಮಣ್ಣಿನಂತೆ ಜೀವ
ಜೀವಿತದಿ ಉಳಿದು
ಬಿಡುತ್ತದೆ ಒಂದು ಕವಿತೆಯಾಗಿ
ನಾಗರಾಜ ಬಿ.ನಾಯ್ಕ
ಮತ್ತೆ ಮತ್ತೆ ಮೆಲುಕು ಹಾಕುತ್ತಾ ನಿಧಾನವಾಗಿ ಹೋದರೆ ರೋಚಕವಾಗಿ ಮನ ಮುಟ್ಟುವಂತೆ ಬರೆದಿದ್ದಾರೆ.
ರಾಮಮೂರ್ತಿ ನಾಯಕ