ಎಸ್ ವಿ ಹೆಗಡೆ ಅವರ ಕವಿತೆ-ಸವಳು

ಹರಡಿ
ಬೆಳೆಯುತ್ತಿದೆ
ನಾಗರೀಕತೆಯ
ತಂತ್ರ ನಾಶಕ
ಮಾರ್ಪಾಡು
ಕೃಷಿ ಭೂಮಿ
ಸವಳಾಗಿ
ಬೆಳೆಯಿಲ್ಲದೇ
ಬರಡು

ಕೊಣಿಕೆ
ಬೆಳೆಯುತ್ತಿದೆ
ವಿಸ್ತಾರವಾಗಿ
ಆಧುನಿಕತೆಯ
ಮಾಯಾ ಜಾಲಕ್ಕೆ
ಮಾಯವಾದ
ಸಂಬಂಧಗಳು
ಸವಳಾಗಿ
ಮೂಡುತಿದೆ
ಬಿರುಕು

ತಲೆ ಎತ್ತುತ್ತಿವೆ
ಸಮಾಜದಲ್ಲಿ
ಬುದ್ಧಿಜೀವಿಗಳ
ಜಾತ್ಯಾತೀತತೆ
ಮತಾಂಧರ
ಪರಕೀಯತೆ
ದೇಶ
ಸವಳಾಗಿ
ಮೂಲೆ
ಸರಿಯುತ್ತಿದೆ


Leave a Reply

Back To Top