ಕಾವ್ಯ ಸಂಗಾತಿ
ಶ್ರೀಪಾದ ಆಲಗೂಡಕರ
ಮರೆಯಲಾಗದ ನೆನಪುಗಳು
ಮುಗ್ಧ ಮನಗಳಿಗೆ ಬಾಲ್ಯದ ತೋರಣಗಳು
ನಿಶ್ಚಿಂತೆಯ ಅರಿವಿನಲಿ ಕಳೆದಿರುವ ಕ್ಷಣಗಳು
ಸ್ನೇಹ ಸಂಬಂಧ ಮರೆಯಲಾಗದ ನೆನಪುಗಳು
ಸ್ವಾರ್ಥದ ಅರ್ಥವೇ ಗೊತ್ತಿಲ್ಲದ ಹೃದಯಗಳು
ಮಮತೆಯ ಮಡಿಲ ಜೋಗುಳ ಪದಗಳು
ಚಂದ್ರನ ತೋರುತ ಉಣಿಸಿರುವ ಕರಗಳು
ನೋವಿನಲಿ ಕಣ್ಣೊರೆಸಿದ ತಾಯಿಯ ಕರುಳು
ಮಿಡಿವ ಕಂಬನಿಗೆ ಸಾಂತ್ವನ ತೋರಿದವಳು
ಎದೆಯ ಕಾಗದದಲಿ ಬರೆದಿರುವ ಭಾವಗಳು
ಚಲಿಸುವ ಮೋಡದಂತೆ ಹಾಯ್ದ ನೆನಪುಗಳು
ಶರಧಿಯ ಹರಿವಿನಂತೆ ತೋರುವ ಪುಟಗಳು
ಹಿಂದೆ ಹೋಗದಂತೆ ಮುದನೀಡುವ ತಿರುಳುಗಳು
ಶ್ರೀಪಾದ ಆಲಗೂಡಕರ