ಮನ್ಸೂರ್ ಮೂಲ್ಕಿ ಅವರ ಕವಿತೆ ನಾವು ಭಾರತೀಯರು

ನಮ್ಮ ದೇಶ ನಮ್ಮ ಪ್ರಾಣ
ನಾವು ಭಾರತೀಯರು
ನ್ಯಾಯ ನೀತಿ ಪಾಲಿಸುವ
ಜಗದ ಶೂರ ವೀರರು
ನಾವು ಭಾರತೀಯರು

ದೇಶಭಕ್ತಿ ನಮ್ಮ ಶಕ್ತಿ
ಸೇವೆಯೊಂದೇ ನಮ್ಮ ಯುಕ್ತಿಯು
ವಿವಿಧ ಧರ್ಮ ಕುಲ ಗೋತ್ರ
ಒಗ್ಗಟ್ಟಾಗಿ ಬದುಕೋ ನಾವು
ನಾವು ಭಾರತೀಯರು

ವೈವಿಧ್ಯತೆ ಏಕತೆ ನಮ್ಮ ಸೌಂದರ್ಯವು
ಹಿಮಾಲಯದ ಶಿಖರ ಪಶ್ಚಿಮದ ಘಟ್ಟವು
ಪ್ರಕೃತಿತಾಣ ವಿಸ್ಮಯ ನಮ್ಮದೇಶ ಸುಂದರ
ನಾವು ಭಾರತೀಯರು.


Leave a Reply

Back To Top