ಎಸ್ ವಿ ಹೆಗಡೆ ಅವರ ಹೊಸ ಗಜಲ್

ನಿನ್ನ ಮೃದು ಹಸ್ತಗಳ ಮೇಲೆ ಮದರಂಗಿ ಹಚ್ಚಿದೆ
ನನ್ನ ಮೊದಲ ಸ್ಪರ್ಷವ  ಒರೆಸಿ ಯಾಕಾಗಿ ಗೆಳತಿ

ನಿನ್ನ ಕಿರುಸೊಂಟವ ಹಿಡಿದು ನಡೆದ ಬೆಳದಿಂಗಳ
ರಾತ್ರಿ ಮರೆತು ವಧುವಾಗಿ ನಿಂತೆ ಯಾಕಾಗಿ ಗೆಳತಿ

ನಿನ್ನ ಗುಳಿ ಕೆನ್ನೆಯ ಮೇಲೆ ಇತ್ತ  ಮುತ್ತಿನ ಮತ್ತ
ಮರೆತು ಶೃಂಗಾರ ಬಣ್ಣವ ಹಚ್ಚಿದೆ ಯಾಕಾಗಿ ಗೆಳತಿ

ನಿನ್ನ  ಕಿರುಸೊಂಟವ ಹಿಡಿದು ನಡೆದ ಬೆಳದಿಂಗಳ
ರಾತ್ರಿ  ಮರೆತು  ವಧುವಾಗಿ ನಿಂತೆ ಯಾಕಾಗಿ ಗೆಳತಿ

ನಿನ್ನ ಸವಿ ನೆನಪುಗಳು ನನ್ನದೆಯ ಬಡಿತದೊಂದಿಗೆ
ಈಗಲೂ ಸನಿಹ ಬರುವುದು ಯಾಕಾಗಿ ಗೆಳತಿ


Leave a Reply

Back To Top