ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ

ನೀನು ಮೌನಿಯಾದಷ್ಟು
ನಾನು ವಾಚಾಳಿ

ನೀನು ಕಡಿಮೆ ಮಾಡಿಕೊಂಡದ್ದು ಮಾತನ್ನು
ಪ್ರೇಮವನ್ನಲ್ಲ

ನಾನು ವಾಚಾಳಿಯಾದಷ್ಟು
ವಿರಹಿಯಾಗುತ್ತಿರುವೆ
ಹುಡುಕುತ್ತಾ ಮಾತಲ್ಲಿ ಪ್ರೇಮ

ನೀನು ಮೊಗೆ ಮೊಗೆದು ತುಂಬುವ
ಒಲವನರಿಯದೇ ಖಾಲೀ
ಬಟ್ಟಲ ಹಿಡಿದು ಬೇಡುತ್ತಲೇ ಇರುವೆ

ನೀನು ಅನುಭವಿಸುತ್ತಲೇ
ಇರುವೆ ಕಡು ಮೋಹಿಯಂತೆ


Leave a Reply

Back To Top