ಸವಿತಾ ದೇಶ ಮುಖ ಅವರ ಕವಿತೆ-ನಗುತಿರೆ ಅಗೆಬಿಗಿಯಲಿ

[8:29 pm, 30/05/2024] Savita Deshmukh: ಜಾತಿ ಜಾತಿಗಳ ವೈಷಮ್ಯದ
ಮಧ್ಯೆ ವೈ ಮನಸುಗಳ ಆಟ
ನೆಟ್ಟ ಭೇದದ ವೃಕ್ಷವು
ಆಳವಾಗಿ ಬೆರೂರಿ
ಜಗದ ಜನರ ಮನದಿ…..

ಕರಾಳ ರೂಪತಾಳಿ ಹೆಮ್ಮರವಾಗಿ ಎಂದೂ
ಬೆಳೆದು ನಿಂತಿತು ಅರಿಯರ್ಯಾರು……
ತಮ್ಮ ತಮ್ಮ ಸೌಕರ್ಯಕ್ಕೆ
ಮೇಲುಕೀಳೆಂಬ ಎರಕವ ಹೊಯ್ದರು….
ತಾರತಮ್ಯದ ಕಿಡಿಯ ಸ್ಪರ್ಶಕ್ಕೆ ಹೊತ್ತಿ ಉರಿಯಲಾರಂಭಿಸಿತು
ಅದೃಶ್ಯಷದಿ….
ಕತ್ತು ಹಿಸುಕುವ ಭಾಸ….
ಸುಟ್ಟು ಸುಡದ ಅಹಂಕಾರದ ಬಿಂಬವು….

ನಮ್ಮ ಪಥವೇ ಶ್ರೇಷ್ಠವೆಂಬ ಭ್ರಾಂತಿಯಲಿ….
ತತ್ತರಿಸಿ ಹೋಗುತಿದೆ ಇಡೀ ಜಗದ ಎದೆಯು- ಭಯದಲಿ…
ಜಾತಿಯು ಕುಪಿತ- ಕಪಟಿಗಳ ಕೈಪಿಡಿಯು….
ನೆಲ ಜನ- ಉಸಿರಾಡುವ ಗಾಳಿ ಒಂದೇ
ಹರಿದಾಡುವ ರಕ್ತ ಮಾಂಸ ಖಂಡವು ಒಂದೇ
ಯಾರು ಹೊತ್ತಿಸಿದರು ಜಾತಿಯ ಅಗ್ನಿಯ…
ಮುಗ್ಧಮನಗಳ ಮೀಟಿ ಮೀಟಿ ಅಟ್ಟಹಾಸದಿ ನಗುತಿಹರು ಅಗಿಬಿಗೆಯಲಿ ….

————————-

Leave a Reply

Back To Top