ರೇಣುಕಾನಾಗರಾಜ್ ಅವರಕವಿತೆ-ಅಪ್ಪನ ಅಪ್ಪುಗೆ

ಜಗದೋಳು ಜನ್ಮದಾತನ ಎದೆಯ ಮೇಲಿನ ನಿದ್ದೆ
ಜಂಭುಸವಾರಿ ಮಾಡಿದಾಗೆ ಮಗುವಿನ ನೆಮ್ಮದಿನಿದ್ದೆ ,

ವಜ್ರಕವಚದ ಆಭರಣ ಬೇಕಿಲ್ಲ ಅಪ್ಪನ ಅಪ್ಪುಗೆಗೆ
ಜಗದೊಡಯನನ್ನೆ ಅಪ್ಪಿ ಮಲಗಿದಾಗೆ ಅಪ್ಪನೆದೆಗೆ,

ಹಸಿದ ಹೊಟ್ಟೆಗೆ ಗಂಜಿ ಬೇಡ ಅಪ್ಪನ ಅಪ್ಪುಗೆಗೆ
ಕಟ್ಟಿಗೆಯ ಮಂಚವುಬೇಡ ಅಪ್ಪನ ಎದೆಯೇ ಹಾಸಿಗೆ,

ಹೊಂಗೆಮರದ ನೆರಳೆ ತಂಪಾಗಿದೆ ಅಪ್ಪಮಗಳ ನಿದ್ದೆಗೆ
ಸಾಕಲ್ಲವೇ ಈ ತಾಣ ನೆಮ್ಮದಿ ಹುಡುಕುವ ಅಜ್ಞಾನಿಗಳಿಗೆ .


One thought on “ರೇಣುಕಾನಾಗರಾಜ್ ಅವರಕವಿತೆ-ಅಪ್ಪನ ಅಪ್ಪುಗೆ

Leave a Reply

Back To Top