ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ನಕ್ಷತ್ರಗಳ ಬಗ್ಗೆ ಬರೆಯುತ್ತಾನೆ ಅವನು ಕಣ್ಣ ಹೊಳಪು ನೋಡುವುದೇ ಇಲ್ಲ
ಹುಣ್ಣಿಮೆ ಕಂಡು ಉನ್ಮತ್ತನಾಗುತ್ತಾನೆ ಅವನು ನಗೆ ಬೆಳಕ ಕುಡಿವುದೇ ಇಲ್ಲ
ನನ್ನೆದೆಯ ಪಿಸುಮಾತು ಅವನಿಗೆ ತಲುಪಿಸಲು ನಿತ್ಯವೂ ಹೀಗೇ ಹೆಣಗುತ್ತೇನೆ
ಹಕ್ಕಿಯ ಕಲರವಕೆ ಕಿವಿಯಾಗುತ್ತಾನೆ ಅವನು ಒಲವ ಮಿಡಿತ ಕೇಳುವುದೇ ಇಲ್ಲ
ಹೂವಾಗುವ ಜೇನಾಗುವ ಕನಸು ಕಾಣುವ ಅಲೆಮಾರಿ ಫಕೀರನವನು ಕೇಳೆ ಸಖಿ
ಜಗದ ಆಗು-ಹೋಗು ಮಾತಾಡುತ್ತಾನೆ ಅವನು ಮನದಾಸೆ ತಿಳಿಯುವುದೇ ಇಲ್ಲ
ಭೂಮಿ ಆಕಾಶಕೂ ಸೇತುವೆ ಕಟ್ಟಿ ಕಾಮನ ಬಿಲ್ಲನು ಹಿಡಿದು ತರುವ ಚತುರನವನು
ನೀರೊಳಗಿದ್ದೂ ಬಾಯಾರಿ ಬಳಲುತ್ತಾನೆ ಅವನು ತೋಳ ಬಳಸಿ ತಬ್ಬುವುದೇ ಇಲ್ಲ
ಮುಂಗಾರು ಮಳೆ ಮೋಡ ಬರೆದ ಚಿತ್ತಾರಗಳಲಿ ತನ್ನನ್ನೇ ತಾನು ಹುಡುಕತ್ತಾನವನು
ಅರಣಾಳ ಹೃದಯ ಪುಟದಲಿ ತುಂಬಿರುತ್ತಾನೆ ಅವನು ತನ್ನಿರುವ ತಿಳಿಯುವುದೇ ಇಲ್ಲ
ಅರುಣಾ ನರೇಂದ್ರ
ಚಂದ ಗಜಲ್ ಅಭಿನಂದನೆ
ಚೆಂದದ ಸುಂದರ ಗಝಲ್
ಮೇಡಂ
Sripad Algudkar ✍️
Pune
ಸೊಗಸಾದ ಚಿಂತನೆ
ಸೂಪರ್ ಮೇಡಂ… ಅಬಾಟೇ