“ಕೆಮಿಸ್ಟ್ರೀ  ಆಫ್  ಟಿಯರ್ಸ್” ತೆಲುಗಿನ ಅನುವಾದಿತ ಕವಿತೆ

ಹೌದು
ಕಣ್ಣೀರು ರಕ್ತಕ್ಕಿಂತ ಶ್ರೇಷ್ಠ
ಬ್ಲಡ್ ಈಜ್ ಥಿಕ್ಕರ್ ದೇನ್ ವಾಟರ್
ನಿಜವಾಗಬಹುದು
ಬಟ್ ನಾಟ್ ಥಿಕ್ಕರ್ ದೇನ್ ಟಿಯರ್ಸ್

ಸೂಜಿ ಚುಚ್ಚಿ ಕೊಂಡಾಗ, ಬ್ಲೇಡ್ ಚಿದಿದಾಗ
ರಕ್ತ ಕುದಿಯುತ್ತದೆ
ರಕ್ತ ಹರಿಯುತ್ತದೆ
ಚೂರಿ ಇರಿತದಿಂದ ರಕ್ತ ಚಿಮ್ಮುತ್ತದೆ
ರಕ್ತವನ್ನು ಕಾಣುವದಕ್ಕೆ
ಕಲ್ಲು, ಕೋಲು, ಸೂಜಿ, ಬ್ಲೇಡ್, ಚಾಕು, ಗುಂಡು
ಏನಾದರೂ ಒಂದನ್ನು ಉಪಯೋಗಿಸಬೇಕು

ಎಲ್ಲರ ರಕ್ತವೂ ಕೆಂಪಾಗಿರುವ ಕಾರಣ
ಎಲ್ಲರೂ ಒಂದೇ ಎಂದು ಒಮ್ಮೆ ಹೇಳುವರು
ನಿಜ , ರಕ್ತ ನಮ್ಮೆಲ್ಲರನ್ನೂ ಒಂದಾಗಿಸಿದೆ
ಒಂದೇ ಛತ್ರದ ಕೆಳಗೆ ಸೇರಿಸಿದೆ
ಎಲ್ಲದರಲ್ಲೂ ಒಂದೇ ರಕ್ತ ಹರಿಯುತ್ತದೆ
ಯಾರನ್ನ ಹೊಡೆದರೂ ಅದೇ ರಕ್ತ ಹರಿಯುತ್ತಿದೆ
ಅಮಾಯಕನನ್ನು ಚುಚ್ಚಿದರೂ ಅದೇ ರಕ್ತ
ನಿರಂಕುಶನನ್ನು ಕಡಿದುಹಾಕಿದರೂ ಅದೇ ರಕ್ತ
ಬಿಳಿಯವನನ್ನ ಕಪ್ಪವನನ್ನ
ಹಣ ಇರುವವನನ್ನ ಇಲ್ಲದವನನ್ನ
ಒಳ್ಳೆಯವನನ್ನ ಮತ್ತು ಕೆಟ್ಟದವನನ್ನ
ಯಾರನನ್ನ ಕೊಲೆ ಮಾಡಿದರೂ ಅದೇ ರಕ್ತ ಚಿಮ್ಮುವಾಗ
ರಕ್ತವು ಮನುಷ್ಯನಿಗೆ ಅಸ್ತಿತ್ವವನ್ನು ನೀಡುತ್ತದೆ ಆಗಲೀ
ಮಾನವೀಯತೆಯಗೆ ನಿವಾಸವಾಗುತ್ತದೆಯೇ?

ಒಳ್ಳೆಯ ರಕ್ತ ಕೆಟ್ಟ ರಕ್ತ ಅಂತ ಇರುತ್ತದೆ ಆಗಲಿ
ಮಹಾಪುರುಷನ ರಕ್ತ ಸಾಮಾನ್ಯ ಮಾನವನ ರಕ್ತಯಂತ ಎಲ್ಲಾದರೂ ಉಂಟ?
ಅದಕ್ಕೇ
ರಕ್ತಕ್ಕಿಂತ ಕಣ್ಣೀರೇ ಶ್ರೇಷ್ಠ
ಆಂತರಿಕ ಮಾನವೀಯತೆಗೆ
ಬಾಹ್ಯರೂಪ ಕಣ್ಣೀರು
ಆರು ಅಡಿ ಮನುಷ್ಯನಿಗೆ ಮುಲರೂಪ ಕಣ್ಣೀರು

ತಿಳಿದಿದೆಯೇ
ಮನಿಷ್ಯನಲ್ಲಿ ಕಣ್ಣೀರಿನ ರಹಸ್ಯ ತಟಾಕಗಳಿವೆ
ನದೀ ಮೂಲವಂತಹಾ ಕಣ್ಣೀರಿನ ಬುಗ್ಗೆಗಳು ಇವೆ
ಯಾರೂ ಕಲ್ಲು ಎಸೆಯುವ ಕೆಲಸವಿಲ್ಲ
ಇರಿತ ಹಾರುವ ಅಗತ್ಯವಿಲ್ಲ
ನೋವುಂಟುಮಾಡುವ ದಾಗಲಿ ಸಂಧಾನ ಮಾಡುವ ದಾಗಿರಲಿ
ಚಿಕ್ಕ ಮಾತು ಸಾಕು
ಕಣ್ಣುಗಳಲ್ಲಿ ನೀರು ಹರಿಯುತ್ತದೆ

ಓದುತ್ತಿರುವ ಪುಸ್ತಕದಲ್ಲಿ ಒಂದು ಸಣ್ಣ ಸಂದರ್ಭ ಸಾಕುಕಣ್ಣೀರಿಗೆ
ನೋಡುತ್ತಿರುವ ಪರದೆಯ ಮೇಲೆ ಒಂದು ದೃಶ್ಯ ಸಾಕು,ಕಣ್ಣೀರಿಗೆ
ಕಿಟಕಿಯಿಂದ ಕಾಣುಸುವ ಒಂದು ಜೀವನದ ತುಣುಕು ಸಾಕು, ಕಣ್ಣೀರಿಗೆ
ಜೀವನದಲ್ಲಿ ಮುಳುಗಿರುವ ಕವನದ ಸಾಲು ಸಾಕು, ಕಣ್ಣೀರಿಗೆ
ವಾಸ್ತವಕ್ಕೆ , ಇವುಗಳು ಸಹ ಅಗತ್ಯವಿಲ್ಲ
ಒಂದು ಕಲ್ಪನೆ
ನಡುಗುವ ಮತ್ತು ನಡುಗುಸುವ ಒಂದೇ ಒಂದು ಕಲ್ಪನೆ ಸಾಕು, ಕಣ್ಣೀರಿಗೆ

ಹೃದಯ ಭಾರವಾಗಿ
ದುಃಖದ ಗುಟುಕು ಗಂಟಲನ್ನು ಹಿಡಿದು
ಕಣ್ಣೀರು ಸುರಿದರೇ, ನೀನು ಮನುಷ್ಯ

ಕಣ್ಣುಗಳು ಮಳೆಯಾದಾಗ
ಮನುಷ್ಯ ಮೋಡ ಕವಿದ ಆಕಾಶ
ಕಣ್ಣುಗಳಲ್ಲಿನ ನೀರು ಸೇದುವಾಗ
ಮನುಷ್ಯ ನೀರಿರುವ ಸಸ್ಯಕ್ಷೇತ್ರ
ನಮ್ಮಿಂದಲೇ ನಾವು ಅಗೆಯುವ
ಬಿಳಿ ಮಣಿಗಳು ಕಣ್ಣೀರು

ಕಣ್ಣೀರು, ರಕ್ತದಂತೆಯೇ, ತಕ್ಷಣವೇ ಉತ್ಪತ್ತಿಯಾಗುವುದಿಲ್ಲ
ಕಣ್ಣೀರು ರಕ್ತದಂತೆ ತುಂಬಿ ಹರಿಯುವುದಿಲ್ಲ
ಒಬ್ಬ ಮನುಷ್ಯನಿಗೆ ಇಷ್ಟು ಕಣ್ಣೀರು ಇರುತ್ತದೆ
ಇರಬೇಕು ಎಂದು ಯಾರು ಹೇಳಲು ಸಾಧ್ಯ?
ರಕ್ತವನ್ನು ಚೆಲ್ಲುವಂತೆ ಮಾಡಲು ಭೌತಿಕ ಚಟುವಟಿಕೆ ಸಾಕು
ಕಣ್ಣುಗಳು ಚಿಮ್ಮ ಬೇಕಾಗಿದ್ದರೇ
ರಸಾಯನಿಕ ಕ್ರಿಯೆ ನಡೆಯಲೇ ಬೇಕು

ಮನುಷ್ಯರನ್ನು ಒಂದುಗೂಡಿಸುವ ರಕ್ತ
ಕಣಗಳ ಸಮುದಾಯವಾಗಿ ಬೇರ್ಪಡಿತು
ಪಾಜಿಟಿವ್ ಆಗಿ ನೆಗಿಟಿವ್ ಆಗಿ ತೆಳುವಾಗಿತು
ಕಣ್ಣೀರು ಮಾತ್ರ ಮಳೆ ನೀರಿನಂತೆ
ಶುದ್ಧವಾಗಿ ಉಳಿಯಿತು

ಯುದ್ಧ ಭೀಭತ್ಸದ ಸಂಕೇತ – ರಕ್ತ
ಯುದ್ಧ ವಿದ್ಧ್ವಂಸದ ನೆನಪು – ಕಣ್ಣೀರು
ಯುದ್ಧದಲ್ಲಿ ರಕ್ತ ಗಡ್ಡೆ ಕಟ್ಟುತ್ತದೆ
ನೆನಪುಗಳಲ್ಲಿ ಕಣ್ಣೀರು ಹರಿಯುತ್ತಲೇ ಇರುತ್ತದೆ
ಹೃದಯ ರಕ್ತದಲ್ಲಿ ತೇಲುತ್ತದೆ ಆಗಲಿ
ಅದರ ಅಸ್ತಿತ್ವವನ್ನು ತೋರಿಸುವುದು ಕಣ್ಣೀರು ಮಾತ್ರ..

ರಕ್ತಹೀನತೆ ಇದ್ದಂತೆ
ದುಃಖದ ಕೊರತೆಯೂ ಇರುತ್ತದೆ
ರಕ್ತವನ್ನು ಹತ್ತಿಸಬಹುದಾಗಲಿ
ಯಾರಾದರೂ ಕಣ್ಣೀರು ಹತ್ತಿಸಬಹುದೇ?


One thought on ““ಕೆಮಿಸ್ಟ್ರೀ  ಆಫ್  ಟಿಯರ್ಸ್” ತೆಲುಗಿನ ಅನುವಾದಿತ ಕವಿತೆ

  1. ಅನುವಾದ ಚಂದವಿದೆ ಇನ್ನೊಂದಿಷ್ಟು ಪದಗಳ ಕನ್ನಡೀಕರಣಕ್ಕೆ ಅವಕಾಶವಿತ್ತು ಅನಿಸುತ್ತದೆ. ದಯಮಾಡಿ ಇದರ ಮೂಲ ಪ್ರತಿಯನ್ನು ನನಗೆ 9481476302 ಗೆ ಕಳುಹಿ.

Leave a Reply

Back To Top