ಶಿವಮ್ಮ ಎಸ್ ಜಿ ಅವರ ಮಕ್ಕಳ ಕವಿತೆ- ಅಮ್ಮ

ಅಮ್ಮ ಅಮ್ಮ ಬಾರಮ್ಮ
ನಮ್ಮಯ ಜೊತೆ ಕೂರಮ್ಮ.
ನಮ್ಮಯ ಆಟ ನೋಡಮ್ಮ.
ನಮಗೆ ಕಥೆಯನು ಹೇಳಮ್ಮ.

ಬೇಸರ ಕಳೆಯಲು ಬಾರಮ್ಮ
ನೇಸರನೊಡನೆ ಏಳುವೆಅಮ್ಮ.
ಸರ್ವರ ಸಲಹುವೆ ನೀನಮ್ಮ
ಬಾಳಿನ ಬೆಳಕು ನೀನಮ್ಮ

ಶಾಲೆಯ
ಪಾಠ ಸಾಕಮ್ಮ
ನಿನ್ನಯ ಹಾಡು ಬೇಕಮ್ಮ.
ಪ್ರೀತಿಯ ಧಾರೆ ಹರಿಸಮ್ಮ.
ಕೆಲಸದ ಹೊರೆ ಇಳಿಸಮ್ಮ.

ಮನೆಯಲಿ ನೀನೇ ಅಧಿಕಾರಿ
ನಿನಗೇ ನಮ್ಮ ಜವಾಬ್ದಾರಿ.
ಮಾಡುವೆ ಎಲ್ಲರ ಸಹಕಾರಿ.
ನಾವೆಲ್ಲರೂ ನಿನಗೆ ಆಭಾರಿ

ಅಕ್ಕನ ಬೇಡಿಕೆ
ಈಡೇರಿಸುವೆ
ಅಪ್ಪನ ಕೋರಿಕೆ
ನೀಗಿಸುವೆ
ಎಲ್ಲಾ ಕ್ಷಣದಲಿ
ಮುಗಿಸುವೆ.
ಮನೆಯಲಿ
ಹರುಷ ತುಂಬುವೆ.

ಮನೆಯೇ ನಿನ್ನ
ಸಾಮ್ರಾಜ್ಯ.
ಮನೆಯೇ ನಮ್ಮ ಆರಾಧ್ಯ.
ಅಲ್ಲಿ ನೀನೇ ನಮ್ಮಸರ್ವಸ್ವ.
ಜಗವೇ ಪಡೆದಿದೆ ಮಾತೃತ್ವ.

ನಿನ್ನಂತೆ ನಾವೂ ಆಗುವೆವು
ಎಲ್ಲರೂ ಕೂಡಿ ಬಾಳುವೆವು.
ಹರುಷದಿ ನಾವು ನಲಿಯುವೆವು.
ಸುಂದರ ನಾಡನು ಕಟ್ಟುವೆವು.


Leave a Reply

Back To Top