ಮಧುಮಾಲತಿ ರುದ್ರೇಶ್ ಬೇಲೂರು ಮಕ್ಕಳ ಕವಿತೆ-“ಹೋಗೋಣ ಶಾಲೆಗೆ””

ಬನ್ನಿರಿ ಗೆಳೆಯರೇ ಬನ್ನಿರಿ ಎಳೆಯರೆˌˌˌ
ಶಾಲೆಯು ತೆರೆದಿದೆ ಕೈಬೀಸಿ ಕರೆದಿದೆˌˌ
ಕುಣಿಯುವ ನಲಿಯುವ ಸಂತಸದಿˌˌˌ
ಹಾಡುವ ರಾಷ್ಟ್ರಗೀತೆ ನಾಡ ಗೀತೆಗಳˌˌ
ನೆನೆಯೋಣ ದೇಶಭಕ್ತರ ಓದೋಣ ಚರಿತ್ರೆಯˌˌˌ
ಆಚರಿಸೋಣ ವಿವಿಧ ಜಯಂತಿಗಳ ˌˌˌ
ಕೂಡುವ ಕಳೆಯುವ ಲೆಕ್ಕ ಬಿಡಿಸುತˌˌˌˌ
ಜಾಣರಾಗುತ ಸತ್ಪ್ರಜೆಗಳಾಗೋಣˌˌ
ಗುರುಗಳೊಂದಿಗೆ ಕಳೆಯುವ ಕ್ಷಣಗಳು ˌˌˌ
ಸಾವಿರ ಹೊನ್ನು ಕೊಟ್ಟರು ಬಾರದು ˌˌ
ಹಾಡುತ ಪಾಡುತ ಜಿಗಿಯುತ ಓಡುತˌˌˌ
ಕಳೆಯೋಣ ಬಾಲ್ಯವ ಸಂತಸದಿˌˌˌ
ಬನ್ನಿರಿ ಗೆಳೆಯರೇ ಬನ್ನಿರಿ ಎಳೆಯರೆˌˌˌ

Leave a Reply

Back To Top