“ಮಾಮ ಕೊಡಿಸಿದ ಗೆಜ್ಜೆ” ಸಣ್ಣ ಕಥೆ-ಹೆಚ್. ಎಸ್. ಪ್ರತಿಮಾ ಹಾಸನ್.

ಮಗುವಾಗಿ ಜನನಿಸಿರಲು ಸಂತಸವು ಬಾಳಿನಲಿ
ನಗುತಿಹೆವು ಮನೆಯಲ್ಲಿ ಜೊತೆಯಲ್ಲಿಯೆ
ಮುಗಿಲಲ್ಲಿ ಸಾಗುವುದು ನೆನೆಯುತಿರೆ ಸುಂದರವು
ನಗಿಸುತಲಿ ಪ್ರೀತಿಯಲಿ ಲಕ್ಷ್ಮಿ ದೇವಿ…..

ಪ್ರತಿಯೊಂದು ಕುಟುಂಬದಲ್ಲೂ ಮುದ್ದು ಮಕ್ಕಳೆಂದರೆ ಇಷ್ಟವೇ. ಅಂತಹ ಮಕ್ಕಳುಗಳು ಮನೆಯಲ್ಲಿದ್ದಾಗ ಸಂತೋಷವನ್ನು ಬಾಳಿನಲ್ಲಿ ಪ್ರತಿಯೊಬ್ಬರು ಕಾಣುತ್ತಾರೆ. ಆ ಮಗುವಿನ ತೊದಲ ಮಾತುಗಳನ್ನು ಕೇಳುತ್ತಾ ನಗುತಲಿ ಜೀವನವನ್ನು ಸಾಗಿಸುತ್ತಾರೆ.ಮುಗಿಲಿನಲ್ಲಿ ಸಾಗಿರುವ ರೀತಿಯಲ್ಲಿ ನೆನೆಸಿಕೊಂಡು ಸುಂದರವಾದ ವಾತಾವರಣ ಕಾಣುತ್ತಾ ನಗು ನಗುತ್ತಾ ಕಾಲವನ್ನು ಕಳೆಯುತ್ತಾರೆ. ಪ್ರತಿಯೊಬ್ಬರೂ ಅಷ್ಟೇ ಮುಗ್ಧವಾದ ಮಕ್ಕಳಿಗೆ ಮೋಸ ಮಾಡಲು ಪ್ರಯತ್ನಿಸುವುದಿಲ್ಲ. ಮಕ್ಕಳಿಗೆ ಇಷ್ಟಪಡುತ್ತಾ ಅವರಿಗೆ ಬೇಕಾದ, ಬೇಡವಾದ, ಎಲ್ಲವನ್ನು ಕೇಳುತ್ತಾ ಸಾಗುತ್ತಾರೆ.
ಹೀಗೆ ಒಂದು ಕುಟುಂಬ ಅಲ್ಲಿ ದಿಯಾ ಎಂಬ ಮುದ್ದಾದ ನಾಲ್ಕು ವರ್ಷದ ಮಗು.ಆ ಮಗುವಿಗೆ ತಂದೆ ಇರುವುದಿಲ್ಲ. ಆ ಮಗುವಿನ ಹಣೆ ಬರಹ ತಂದೆ ತೀರಿಹೋಗಿದ್ದು. ತಂದೆ ಇಲ್ಲದಂತೆ ಬೆಳೆಯುತ್ತಿರುತ್ತದೆ.ತಾಯಿಯ ಪೋಷಣೆಯಲ್ಲಿ ಮಗು ಬೆಳೆಯುತ್ತಿರುತ್ತದೆ.ತಂದೆಯು ದುಶ್ಚಟಗಳಿಂದ ತೀರಿಹೋಗಿರುತ್ತಾನೆ. ಆಗ ವಿಧಿ ಇಲ್ಲದೆ ತಂದೆಯ ಪ್ರೀತಿಯನ್ನು ಆ ಮಗು ತಾಯಿಯ ಅಣ್ಣನೊಂದಿಗೆ ಅಂದರೆ ಮಾವನೊಂದಿಗೆ ಪಡೆಯುತ್ತಿರುತ್ತದೆ.ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆಯುತ್ತಿದ್ದ ದಿಯಾಗೆ ಬರಬರುತ್ತ ಎಲ್ಲ ಅರ್ಥವಾಗುತ್ತಿತ್ತು.ತಾನು ಹಾಕಿದ್ದ ಕಾಲು ಬಳೆಗಿಂತಲೂ ಆ ಮಗುವಿಗೆ ಕಾಲು ಗೆಜ್ಜೆಯ ಮೇಲೆ ಆಸೆ. ದಿನನಿತ್ಯ ಆಟವನ್ನು ಆಡುವಾಗ ಆ ಮಗುವಿನ ಜೊತೆಗೆ ಆಡುತ್ತಿದ್ದ ಮಕ್ಕಳ ಕಾಲಲ್ಲಿ ಕಾಲ್ಗೆಜ್ಜೆಗಳನ್ನು ಕಂಡು ಆ ಮಗು ಬಹಳಷ್ಟು ಆಸೆಪಡುತ್ತದೆ. ತಾಯಿಗೂ ಮಗುವಿಗೆ ಕಾಲ್ಗೆಜ್ಜೆಯನ್ನು ಕೊಡಿಸಬೇಕೆಂಬ ಆಸೆ.ಆದರೆ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರಲಿಲ್ಲ. ಬಹಳಷ್ಟು ಬಡತನ, ಹಣವು ಇರುವುದಿಲ್ಲ. ಆದರೂ ಸಹ ಮನೆಯನ್ನು ನಡೆಸಲೇಬೇಕಾದ ಪರಿಸ್ಥಿತಿ ಇದರಿಂದ ತಾಯಿಯು ತನ್ನ ಕೈಲಾದಷ್ಟು ದುಡಿಮೆಯನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿರುತ್ತಾಳೆ. ದಿನನಿತ್ಯದ ಕಷ್ಟಗಳು ಹಲವಾರು ಇರುತ್ತವೆ. ಕೆಲಸದಲ್ಲಿ ಕಾಲವನ್ನೂ ಕಳೆದುಕೊಳ್ಳುವುದರಲ್ಲಿ ಆಕೆ ಮದ್ನಾಳಾಗಿರುತ್ತಾಳೆ. ದೇವರ ಪೂಜೆ, ಮನೆಯಲ್ಲಿನಾ ಎಲ್ಲಾ ಕೆಲಸಗಳನ್ನು ನಿರ್ವಹಣೆ ಮಾಡುವುದು. ಆಕೆ ಮಾಡುವ ಕೆಲಸದಿಂದ ಆಕೆಗೆ ಆದಾಯ ಯಾವ ಮಟ್ಟಕ್ಕೂ ಇರುವುದಿಲ್ಲ.ಆ ಸಂಬಳವು ಅಷ್ಟೇನೂ ಇರಲಿಲ್ಲ.
ತಾಯಿ ಮಗು ತನ್ನ ಅಮ್ಮ ಮತ್ತೆ ಅಣ್ಣನ ಆಸರೆಯಲ್ಲಿ ಇರುವುದರಿಂದ ತಾಯಿಯು ಯಾವ ಆಸೆಗಳನ್ನು ಪಡುತ್ತಿರಲಿಲ್ಲ.ಆದರೆ ಪುಟ್ಟ ಮಗು ಮಾವ ನನಗೆ ಕಾಲ್ಗೆಜ್ಜೆ ಕೊಡಿಸುವೆಯಾ? ಎಂದು ಪ್ರಶ್ನೆಯನ್ನು ಕೇಳುತ್ತದೆ.ಆಕೆಯ ಮಾವ ಸರ್ಕಾರಿ ನೌಕರರಾಗಿದ್ದರು.ಬರುವ ಸಂಬಳಕ್ಕಿಂತ ಮನೆ ಖರ್ಚು ಹೆಚ್ಚಾಗುತ್ತಿತ್ತು.ಮಗು ಕಾಲ್ಗೆಜ್ಜೆ ಕೇಳಿದ ತಕ್ಷಣ ಅವರಲ್ಲಿ ಹಣ ಇಲ್ಲದಿದ್ದರೂ ಸಹ ಹಣದ ವ್ಯವಸ್ಥೆ ಮಾಡಿಕೊಂಡು ಮಗುವಿನ ಆಸೆಯಂತೆ ಕಾಲ್ಗೆಜ್ಜೆಗಳನ್ನು ತರಲು ಹೋಗುತ್ತಾರೆ.ತನ್ನ ತಾಯಿಯೊಂದಿಗೆ ಮಗುವನ್ನು ಕರೆದುಕೊಂಡು ಹೋಗಿ ಆ ಮಗುವಿಗೂ ಮತ್ತು ಅಜ್ಜಿಗೂ ಕಾಲ್ಗೆಜ್ಜೆಯನ್ನು ಕೊಡಿಸುತ್ತಾರೆ.ಅಜ್ಜಿ ಮೊಮ್ಮಗಳು ಇಬ್ಬರೂ ಕಾಲ್ಗೆಜ್ಜೆಯನ್ನು ತಂದು ಹಾಕಿಕೊಳ್ಳುತ್ತಾರೆ.ಅಜ್ಜಿಯ ಕಾಲ್ಗೆಜ್ಜೆ ಕಂಡಾಗ ಮಗು ಹರ್ಷದಿಂದ ಕುಣಿಯುವುದು.ಮುದ್ದಾದ ಮಗುವಿನ ಕಾಲ್ಗೆಜ್ಜೆಯ ಸದ್ದಿಗೆ ಮನೆಯವರೆಲ್ಲ ಖುಷಿಪಡುತ್ತಿದ್ದರು.ತಾಯಿಯಂತು ಬಹಳ ಖುಷಿಪಡುತ್ತಿದ್ದಳು.ಮಗುವಿನ ಚಿಕ್ಕ ಆಸೆಯಾಗಿದ್ದರೂ ಆಸೆಯನ್ನು ಪೂರೈಸುತ ಮಾಮನು ಆಕೆಯ ಕಾಲ್ಗೆಜ್ಜೆಯ ಶಬ್ದಕ್ಕೆ ನಕ್ಕು ನಲಿಯುವರು.ಆ ಮಗುವಿನ ಕಾಲ್ಗೆಜ್ಜೆ ಶಬ್ದವು ಎಲ್ಲರ ಮನವನ್ನು ಪುಳಕಿತಗೊಳಿಸುವುದು.
ಆ ಮಗುವೂ ಅಷ್ಟೇ ಕಾಲ್ಗೆಜ್ಜೆಯನ್ನು ತೊಟ್ಟು ಬಹಳ ಖುಷಿಯನ್ನು ಪಡುತ್ತಿತ್ತು.ತಂದೆ ಇಲ್ಲದಿದ್ದರೂ ಸಹ ತಂದೆಯ ಪ್ರೀತಿಯನ್ನು ಆಕೆಯ ತಾಯಿಯ ಅಣ್ಣನು ಪೂರೈಸುತ್ತಿದ್ದರು.ಭಗವಂತ ಯಾವುದೋ ಒಂದು ರೂಪದಲ್ಲಿ ಯಾವ ಪ್ರೀತಿ ಇರಲಿಲ್ಲವೋ ,ಕೊರತೆಯನ್ನು ಇನ್ನೊಬ್ಬರ ರೂಪದಲ್ಲಿ ನೀಡುತ್ತಾನೆ.ಯಾರೂ ಇಲ್ಲದವರಿಗೆ ದೇವರೇ ಗತಿ ಎಂಬಂತೆ ದೇವರ ನಿಯಮಕ್ಕೆ ಯಾರೂ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ.ಯಾರ ಯಾರ ಜೀವನದಲ್ಲಿ ಯಾವ ಯಾವ ರೀತಿ ಪಾತ್ರವನ್ನು ವಹಿಸಬೇಕೆಂದು ಬರೆದು ಕಳಿಸಿರುತ್ತಾನೋ ಅಂತೆಯೇ ವಿಧಿಯ ಲಿಖಿತ ನಡೆಯುವುದು ಎಂಬುದನ್ನು ಮನುಜ ಮರೆಯಬಾರದು.ವಿಧಿಯ ಬರಹದ ಮುಂದೆ ಮನುಜ ಏನೂ ಮಾಡಲಾರ. ಯಾವುದೇ ರೀತಿಯ ಸಂಬಂಧವನ್ನು ಭಗವಂತ ಮೇಲೆ ಬರೆದು ಕಳಿಸಿರುತ್ತಾನೆ.


Leave a Reply

Back To Top