“ಮನಸ್ಸು….!” ಮಲಯಾಳಂ ಕವಿತೆಯ ಅನುವಾದ-ಐಗೂರು ಮೋಹನ್ ದಾಸ್ ಜಿ.

ನನ್ನ ‘ಮನಸ್ಸು’ ನ್ನು
ಯಾವುದೇ ಕಾಲದಲ್ಲಿಯೂ
ಕಟ್ಟಿ ಹಾಕಲು ಸಾಧ್ಯವಿಲ್ಲ….!

ಮನಸ್ಸು ಸದಾ ಸಮಯ
ಸುಮ್ಮನೆ ಹಲವು ವಿಚಾರಗಳನ್ನು
ಯೋಚಿಸುತ್ತಲೇ ಇರುತ್ತದೆ….!

ಪ್ರೀತಿ- ಪ್ರೇಮ-ಪ್ರಣಯ..
ಜೊತೆಗೆ ಹತ್ತಾರು ಸಂಬಂಧಗಳತ್ತ
ಮನಸ್ಸು ಸಾಗಿದಾಗ…..
ಒಂದು ಕೆಟ್ಟ ಘಳಿಗೆಯಲ್ಲಿ
ಪ್ರೀತಿಯ ಬಳಗ ನಮ್ಮಿಂದ
ಕಾಣೆಯಾದ್ದರೇ………?!

ಮೀನುಗಳನ್ನು ಹುಡುಕಿ
ನದಿಯೂ…….
ಗಾಳಿಯನ್ನು ಹುಡುಕಿ
ಕಸ ಕಡ್ಡಿಗಳು…….
ಹೂವುಗಳನ್ನು ಹುಡುಕಿ
ಸಸ್ಯಗಳು…….
ಇರುವೆಗಳನ್ನು ಹುಡುಕಿ
ಸಕ್ಕರೆಗಳು…….
ನಕ್ಷತ್ರಗಳನ್ನು ಹುಡುಕಿ
ಭಾನುವೂ…….
ಹುಡುಕಾಟದಲ್ಲಿ ತೊಡಗುತ್ತದೆ….!!

ಹುಡುಕಿಕೊಂಡು ಬರಲು
ಜೀವರಾಶಿಗಳು ಇಲ್ಲಾದ
ಪಾಪಿ ಜನ್ಮದ ‘ಮನುಷ್ಯರು ‘ ನ್ನು
ದೇವರು…….
ಸ್ವಗ೯ದಲ್ಲಿಯೂ….
ಅಥವಾ
ನರಕದಲ್ಲಿಯೂ…….
ಉಪ್ಪಿನಲ್ಲಿ ಹಾಕಿ
ಇಟ್ಟಿರುತ್ತಾನೆ…..!!!
—————————————-

Leave a Reply

Back To Top