ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ-ಸದಾವಕಾಶ

ಕರೆದಾಗ ಓಡೋಡಿ ಬರದು
ಕಾಯುತಿದ್ದರೂ ಸಿಗದು
ಸಿಕ್ಕಿದಾಗ ಬರಸೆಳೆದು ಅಪ್ಪಿಕೋ
ಅವಕಾಶವನು ನಿನಗೆ ದೊರೆತ
ಸದಾವಕಾಶವನು

ಅವಕಾಶ ವಂಚಿತ ನಾನೆನಬೇಡ
ಕಿಂಚಿತ್ತು ದೊರೆತರೂ ಬಿಡಬೇಡ
ಸಿಕ್ಕಿದವಕಾಶದಿ ಸಾಧಿಸು ನೀ
ದೇಶದ ಕೀರ್ತಿಯ ಬೆಳಗು ನೀ
ವಿಶೇಷವಾಗು ನೀ

ಕೂಲಿಯಾದರೇನು ಮನವೇ
ಕೆಲಸ ಕಲಿತು ಮಾಲೀಕನಾಗು
ಸುವರ್ಣವಾಕಾಶ ಸಿಕ್ಕಾಗ
ಬಡವರ ಸೇವಕನಾಗು
ಸದುಪಯೋಗವಾಗು

ಮಹಾತ್ಮ ನೀನಾಗಬೇಕಿಲ್ಲ
ಮನುಷ್ಯತ್ವ ಕಳೆದುಕೊಳ್ಳಬಾರದಲ್ಲ
ಮೊದಲು ಮಾನವನಾಗಲು ಕಲಿ
ಸಂಸ್ಕೃತಿಯುತ ಮನುಷ್ಯನಾಗಿ ಉಳಿ
ಭಾರತಾಂಬೆಯ ಮಡಿಲಲಿ


Leave a Reply

Back To Top