ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
“ನನ್ನ ಮನೆ”
ನನ್ನ ಕನಸಿನ ಮನೆಗೆ ಬಾಗಿಲಿರದಿರಲಿ
ಹುಗ್ಗಿಯ ಘಮ ಹಿಗ್ಗಿ ಹಬ್ಬುವಂತಿರಲಿ
ಸೊಬಗ ಸಗ್ಗ ಹೃದಯ ತಾಕುವಂತಿರಲಿ
ನೊಗದ ಭಾರ ಮರೆಸುವ ದನಿಯಿರಲಿ
ಮನೆಯ ಸುತ್ತ ಒಲವ ಬಳ್ಳಿಯಿರಬೇಕು
ನಗುವ ಮೊಗ ಅದರ ಸುಮವಾಗಬೇಕು
ಫಲವ ಹಂಚಿ ನಾವು ಸವಿಯಬೇಕು
ಇರದುದ ಬಿಟ್ಟು ನಾವು ಸಾಗಬೇಕು
ಬೆಳ್ಳನೆ ಬೆಳಕು ಅಂಗಳ ತುಂಬುವಂತೆ
ಬೆಳದಿಂಗಳು ಹಬ್ಬಿ ಕತ್ತಲು ಸುಳಿಯದಂತೆ
ಸದ್ಭಾವ ನೆಲೆಸಿ ಮನೆ ಮಂದಿರವಾದಂತೆ
ನಿಷ್ಕಲ್ಮಶ ಮನ ಎಂದೂ ಭಾರವಾಗದಂತೆ
ಗೋಡೆಗಳು ಏರಿ ಅಂತರ ಮೂಡದೆ
ಹತ್ತಿರವಾಗಲಿ ಮನಸು ಭೇದ ಕಾಡದೆ
ಭಾವಗಳು ಒಂದಾಗಿ ಎಂದೂ ಕಂಗೆಡದೆ
ಪ್ರೀತಿ ಸ್ನೇಹ ಉಕ್ಕಲಿ ಬರಡಾಗದೆ
ನಿರಂಜನ ಕೆ ನಾಯಕ
Superb