ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಈಗ.
ನಿಜ ಹೇಳಿ ಸ್ನೇಹಿತರೆ ಈಗ
ನಾವೆಷ್ಟು ಸುಖಿಗಳು.
ಅಧುನೀಕರಣದ ಉಪಕರಣದ ಮುಂದೆ
ತ್ಯಾಜ್ಯದ ಸಲಕರಣೆಯಾಗಿಹೆವು
ಕೈ ಬೆರಳ ತುದಿಯಿಂದ
ಜಗತ್ತನ್ನೇ ಆಳುವ ನಾವು
ಅದೇ ಕೈ ಬೆರಳ ತುದಿಯಿಂದ
ನಮ್ಮ ಸಾವು ಕೊಳ್ಳುತಿಹೆವು.
ಕಲಿಸುವ ಗುರುವಿಗೂ ಈಗ
ಪಾಠ ಕಲಿಸುವ ಪಾಠ
ಹೋಯಿತು ಈಗ ಛಡಿ ಛಂ ಛಂ
ಹೊಡೆದರೆ ಮಾಸ್ತರೇ ಢಂ.
ಹೆಜ್ಜೆ ಹೆಜ್ಜೆಗೂ ನಿಲ್ಲುವ ಮೆಟ್ರೊದಿಂದ
ಮನೆಯೊಳಗೇ ನಾವು ಓಡುತಿಹೆವು
ಲೇಖನಿ ಬಳಸದೇ ಪರೀಕ್ಷೆಯಲ್ಲಿ
ಬರೀ ಚುಕ್ಕೆ ಇಟ್ಟು ಪಾಸಾಗುತಿಹೆವು
ಮೂಲಾಕ್ಷರ ಸರೀದು ಅಲ್ಪಾಕ್ಷರ ಬರುತಿವೆ
ಸಂಬಂಧಗಳ ಬಂಧವೂ ಅಲ್ಪವಾಗುತಿದೆ ಅಕ್ಕ ಪಕ್ಕದಲಿ ಜನ ಇದ್ದರೂ
ನಮಗೆ ಏಕಾಂಗಿತನ ಕಾಡುತಿದೆ
ಮಿಂಚಂಚೆ ಸಚಿತ್ರ ಅಂಚೆ
ಅಂಚೆ ಅಣ್ಣನ ಕೊಂದಿದೆ
ಇವುಗಳನೇ ನಂಬಿ ಬದುಕುವ ನಮಗೆ
ನಮ್ಮ ತನವೇ ಕುಸಿದಿದೆ
ನವೀಕರಣದ ಆಚಾರ ವಿಚಾರದಿಂದ
ನಮಗೇ ನಾವೇ ಕೀಳಾದರೂ
ಕೈ ಬೆರಳಲಿ ಆಡುವ ಗೊಂಬೆಯಾಗಿ
ಬೆರಳ ನಂಬಿ ಬದುಕುತಿಹೆವು
ಸಂಬಂಧಗಳ ಬಂಧದಲಿ
ಬಾಳಿ ಬದುಕಿದ ಜೀವಕೆ
ಮನಃ ಪರದೆಯಲಿ ನೆನಪು ಮೂಡಿಸಲು
ಬೆರಳ ತುದಿಯೇ ಬೇಕಾಗಿದೆ
ಹಿಂದಿನ ದಿನಗಳನು ಕಳೆದುಕೊಂಡ ನಾವು
ಇಂದಿನ ದಿನಗಳಲ್ಲಿ ಏಗಲಾಗದೇ
ಬಟಾ ಬಯಲಲ್ಲಿ ನಿಂತು
ನಮಗೇ ನಾವೇ ಹುಡುಕುತ್ತಿದ್ದೇವೆ.
ಪ್ರಮೋದ ಜೋಶಿ
ನಿಜ, ಹಿಂದಿನ ದಿನಗಳ ಕಳೆದುಕೊಂಡು ಇಂದು ನಮಗೆ ನಾವೇ ಹುಡುಕುತ್ತಿದ್ದೇವೆ.
Beautiful
ಆಧುನಿಕ ಜಗತ್ತಿನ ಜೀವನ ಸರಳ ಸಜ್ಜನಿಕತೆಯನ್ನು ಮರೆಮಾಚಿದೆ ನೋವಿನಿಂದ ಆಗುವ ಅನುಭವ ಯಾರಿಗೂ ಬೇಡವಾಗಿದೆ ಎಲ್ಲವೂ ತಂತ್ರಜ್ಞಾನ ಎಂಬ ಭಗವಂತನ ವರಪ್ರಸಾದ ಸಹಜವಾಗಿಯೇ ಕೃತಕ ಜೀವನವ ಜೀವಿಸುವಂತೆ ಮಾಡಿದೆ…….
ಅದ್ಭುತ ಸಾಲುಗಳ ಹಂದರದ ಕವನವಿದು ವಾಸ್ತವತೆಗೆ ಹಿಡಿದ ಕೈಗನ್ನಡಿ.
Near to the reality..
Wonderful.!
Very nice.